ಕಾವ್ಯ ಸಂಗಾತಿ
ಎಲ್ಲಿ ಹೋದರು ಎಲ್ಲ
ನರಸಿಂಗರಾವ ಹೇಮನೂರ
ಎಲ್ಲಿ ಹೋದರು ಎಲ್ಲ
ನನ್ನ ಬಣ್ಣಿಸಿದವರು?
ನಿನ್ನೆ ಮೊನ್ನೆಯವರೆಗೆ
ನನ್ನ ಜೊತೆ ಇದ್ದವರು!
ಮಾಯವಾಗಿಹರೆಲ್ಲಿ
ಸುತ್ತಲಿದ್ದವರು?
ಕೆಲಸ ಕಾರ್ಯಕ್ಕಾಗಿ
ಬಾಲ ಬಡಿದವರು!
ಸುಮ್ಮ ಸುಮ್ಮನೆ ಹೊಗಳಿ
ಅಟ್ಟಕೇರಿಸಿದವರು
ಶಾಲು ಹಣ್ಣುಗಳಿಂದ
ಸತ್ಕರಿಸಿದವರು!
ಓಹೊ! ಅರ್ಥವಾಯಿತು
ಈಗ ನಾನು ನಿವೃತ್ತ
ಅದಕೆಂದೆ ನಾನೀಗ
ಇಲ್ಲ ಉಪಯುಕ್ತ!
ಈಗವರು ಮತ್ತಲ್ಲೆ
ಸುತ್ತುತಿರಬಹುದು
ಹೊಸದಾಗಿ ಬಂದವರ
‘ಜೀ’ ಗೈಯ್ಯುತಿರಬಹುದು!
ಬಹಳ ಅರ್ಥ ಗರ್ಭಿತ ಪದ್ಯ ರೂಪದಲ್ಲಿ ಬರೆದಿದ್ದೀರಿ, ತುಂಬಾ ಅಭಿನಂದನೆಗಳು ಸರ್
ಧನ್ಯವಾದಗಳು