ಸವಿತಾ ಮುದ್ಗಲ್ ಕವಿತೆ-ರೈಲ್ವೆ ನಿಲ್ದಾಣ

ಕಾವ್ಯ ಸಂಗಾತಿ

ರೈಲ್ವೆ ನಿಲ್ದಾಣ

ಸವಿತಾ ಮುದ್ಗಲ್

ಬನ್ನಿ ಬನ್ನಿ ನೋಡಬನ್ನಿ ಉದ್ದನೆಯ ರೈಲು
ಸರಪಳಿಯಂತೆ ಜೋಡಿಸಿದ ಬೋಗಿಯ ಸ್ಟೈಲು
ಪುಟ್ಟಪುಟ್ಟ ಕಿಡಕಿಗಳು ಇವೆಯಂತೆ ಇಣುಕಿ ನೋಡಲು
ಜೋಡಣೆಯಾಗಿದೆ ಸುಂದರವಾಗಿದೆ ನಮ್ಮ ರೈಲು||

ಎಲ್ಲೆಂದರಲ್ಲಿ ಹಾದುಹೋಗುವ ರೈಲು
ಹಳಿ ತಪ್ಪಿದರೆ ತಪ್ಪದು ಜೀವನ ಪೋಲು
ಗುಡ್ಡದ ಮೇಲೆ ಹೊರಟರೆ ಕಾಣುವೆ ನಾನು
ಹೆಬ್ಬಾವುವಿನ ಹಾಗೇ ನೋಡಲು ನಮ್ಮ ರೈಲು||

ಬೋಗಿಯು ಹೊತ್ತೋಯ್ಯುವುದು ನಮ್ಮ್ಮನು
ಒಂದು ಸ್ಥಳದಿಂದ ಮತ್ತೊಂದು ಸ್ಥಳಕೆ
ಕೊಡುವುದು ಉಲ್ಲಾಸ ಪ್ರಯಾಣದಿ ಮನಕೆ
ಬಲು ಮೋಜಿನ ಸಾರಿಗೆಯಿದುವೇ ನಮ್ಮ ರೈಲು||

ಕೂಡುವರು ನೂರಾರು ಜನರು ರೈಲಿನಲ್ಲಿ
ವಿನಿಮಯವಾಗುವುದು ಭಾವನೆ ಭಾಷೆಯಲ್ಲಿ
ಚಿರಪರಿಚಿತ ಎಲ್ಲರೂ ಆಗುವರು ಪರಿಚಿತವಾಗಿ
ಜೀವನ ಪಯಣನದ ಪ್ರಯಾಣದ ನೆನಪಾಗಿ||

ಮಕ್ಕಳ ಪಾಡಿಗೆ ಚುಕುಬುಕು ರೈಲಿನ ಹಾಡಾಗಿ
ದುಡಿಯುವ ಜನಕೆ ನೀ ಬಾಳಿನ ಆಧಾರವಾಗಿ
ಬಿಸಿಬಿಸಿ ಚಾಯನು ಮಾರಿದ ನಮ್ಮ ಹೆಮ್ಮೆಯ
ಪ್ರಧಾನಿ ಈ ಬಣ್ಣದ ರೈಲಿನ ನಿಲ್ದಾಣದ ಜಾಗದಲ್ಲಿ||

ಸಾರಿಗೆಯಲ್ಲೇ ನೀ ಪಡೆದಿರುವೆ ಅತ್ಯುತ್ತಮ
ಹಾದುಹೋಗಬೇಕು ಭಾರತದ ಪ್ರತಿ ಹಳ್ಳಿಗಳಲ್ಲಿ
ಶ್ರೀ ಆಂಜನೇಯನ ಅಂಜನಾದ್ರಿ ಬೆಟ್ಟದಿಂದ
ಶ್ರೀ ರಾಮನ ಮಂದಿರ ತಲುಪಲು ಬೇಕು ರೈಲು||


Leave a Reply

Back To Top