ಅಮು ಭಾವಜೀವಿ ಮುಸ್ಟೂರು-ಕವಿತೆ

ಕಾವ್ಯ ಸಂಗಾತಿ

ಅಮುಭಾವರಸಾಯನ

ಅಮು ಭಾವಜೀವಿ ಮುಸ್ಟೂರು

ಮಂಜು ಮುಸುಕಿದ ಮುಂಜಾನೆ
ತಂದಿದೆ ಮನದಲಿ ಸದ್ಭಾವನೆ
ಹಸಿರ ತೇರಿನಲಿ ಹೊರಟ
ಬಿರಿದ ಮೊಗ್ಗಲಿ ಹೊಮ್ಮುವ ಸುವಾಸನೆ

ಕತ್ತಲೆ ಕಳೆದು ಬೆಳಕು ಮೂಡುವಾಗ
ಹೊಮ್ಮಿದೆ ಹಕ್ಕಿಗಳ ಸುಮಧುರ ರಾಗ
ಜುಳು ಜುಳು ಸಲಿಲಿದ ಸಂಗೀತ
ಆನಂದವ ಉಣಪಡಿಸಿದೆ ಜಗಕ್ಕೀಗ

ಸೂರ್ಯ ರಶ್ಮಿಯ ಹೊನ್ನ ಕಿರಣ
ನವ ಪಲ್ಲವಕೆ ಶುಭ ಕಾರಣ
ಉದಯಕಾಲದ ಪರಿಶುದ್ಧ ಭಾವಕೆ
ಪ್ರಕೃತಿಯ ಈ ಸೊಬಗೆ ಸ್ಪೂರ್ತಿ ಸ್ಪುರಣ

ನಿಷ್ಕಲ್ಮಶ ನಿಶ್ಚಿಂತ ನಿಮಿಷ
ಮನಕೆ ತಂದಿದೆ ಸಂತೋಷ
ತಣಿದ ಜೀವಗಳ ತಣಿಸಿದ
ಶುಭೋದಯದ ಈ ಸತ್ಯ ಸಂದೇಶ

ಸವಿಯಲಿದುವೆ ಸ್ವರ್ಗ ಸದೃಶ
ಮೈ ಮುರಿಯುತೆದ್ದಿದೆ ನವ ದಿಶ
ನಾವೋನ್ಮೇಷ ಶಾಲಿನಿ ನಿಸರ್ಗ
ಎದ್ದೇಳಿ ಸಾಕು ನೀಡಿದೆ ಆದೇಶ


Leave a Reply

Back To Top