ಕಾವ್ಯ ಸಂಗಾತಿ
ಜುಲ್ ಕಾಫಿಯಾ ಗಜಲ್
ನಯನ. ಜಿ. ಎಸ್.
ರಂಗು ರಂಗಿನ ಲೋಕವಿದು ನ್ಯಾಯಾಸತ್ವಕ್ಕೆ ಬೆಲೆಯಿಲ್ಲ ಜಾಲಿಮ್
ಕ್ಷಣಕ್ಕೊಂದರಂತೆ ನುಡಿ ನಂಬುಗೆಯ ತತ್ವಕ್ಕೆ ನೀತಿಯಿಲ್ಲ ಜಾಲಿಮ್
ಸಿಕ್ಕಂತೆ ಸಮಯ ಕಾಲೆಳೆಯುತ ದೂಡಿ ನಗುವರು ಲವಣ ಕೂಪಕೆ
ಹಿರಿತನದ ಆದರದ ಹಿರಿಮೆಯ ಸದ್ವಾದಕ್ಕೆ ಹೆಗ್ಗುರುತಿಲ್ಲ ಜಾಲಿಮ್
ಅಳುಮುಂಜಿಯಾದರೇನು ಕಂಬನಿಯೇ ಪ್ರಿಯವಂತೆ ಸ್ವಾರ್ಥಿಗರಿಗೆ
ಸಾರ್ಥಕ್ಯ ಬದುಕಿನ ಪಥದಿ ಸದ್ವಿಚಾರಕ್ಕೆ ಮನ್ನಣೆಸಿಗುತ್ತಿಲ್ಲ ಜಾಲಿಮ್
ಜಗ್ಗುವ ಆಟೋಟದಲಿ ಬಗ್ಗಿದ ತನುವಿಗೆ ಮತ್ತಷ್ಟು ಪೆಟ್ಟೆಂಬ ಪಾಠವು
ಅಂತರಾತ್ಮದ ಚೊಕ್ಕ ಅಭಿರುಚಿತನಕ್ಕೆ ಅವಿಚ್ಛಿನ್ನತೆಯಿಲ್ಲ ಜಾಲಿಮ್
ಭ್ರಮೆಯೊಳು ಬೆರೆತು ನಗುವವರ ನಡುವೆ ಏಕಾಂಗಿಯು ‘ನಯನ’
ರೋಧಿಸುತಿಹ ಭಾವನೆಗಳ ವೇದನಾಲಾಪಕ್ಕೆ ಪ್ರಸವವಿಲ್ಲ ಜಾಲಿಮ್
Superb