ಕಾವ್ಯ ಸಂಗಾತಿ
ಗಜಲ್
ಜಯಶ್ರೀ ಭ.ಭಂಡಾರಿ.
ಶಾರದೆಯ ವೀಣೆಯ ಸವಿದ್ವನಿ ಕವಿತೆ ಬರೆಸಿತೇ ಹೇಳು.
ಮರೆಯದೇ ಸಪ್ತಸ್ವರ ತಂತಿಯ ಮೀಟುತ ಕರೆಸಿತೇ ಹೇಳು.
ಸರಿಗಮ ರಾಗ ಸಂಯೋಜನೆ ಇಲ್ಲದೆ ಸುನಾದ ಹೊಮ್ಮುವುದೇ
ಅರಿತು ಅನುರಾಗದಿ ಆಯೋಜನೆ ಸಲ್ಲದೆ ಉನ್ಮಾದ ಬೆರೆಸಿತೇ ಹೇಳು.
ಸಂಗೀತದಿಂದ ದೀಪ ಬೆಳಗಿದ,ಮಳೆ ತರಿಸಿದ ಅಂದಿನ ಕಾಲ ನೆನಪಿಲ್ಲವೇ
ಭೃಂಗದ ಆಲಾಪನೆಗೆ ಇಳೆ ತಲೆದೂಗುತ ಅರಸಿ ತೊರೆಸಿತೇ ಹೇಳು
ದೇವನೂ ಪ್ರಾರ್ಥನೆಯ ಸುಸ್ವರದಿ ಒಲಿದು ಅಭಯ ನೀಡುವನು
ಭಾವನೆಗಳ ಅರ್ಥದಿ ಪದಪುಂಜ ನಲಿದಾಡಿ ಒಲವಗೀತೆ
ಮರೆಸಿತೇ ಹೇಳು.
ಭೂಮಂಡಲವೇ ನಾದ ಬ್ರಹ್ಮನಿಗೆ ಮಣೆ ಹಾಕಿ ಹಣೆ ಮನಿದಿದೆ ಜಯಾ
ನಭೋಮಂಡಲ ಜಿಮ್ ಜಿಮ್ ಉಲಿದು ಭೂಮಿಗೀತ ಮೆರೆಸಿತೇ ಹೇಳು