ಬಾಗೇಪಲ್ಲಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ನಗುವು ಹೊಂಬೆಳಕಿನ ಎಳೇ ಸೂರ್ಯ ರಶ್ಮಿಯಂತೆ ಕಂದಾ
ಎಲ್ಲ ಜೀವಿಗಳ ತಾಜಾ ಇರಿಸೆ ಹಾಸ್ಯ ಅವಶ್ಯವಂತೆ ಕಂದಾ

ಜೀವನದ ಉತ್ತುಂಗಕ್ಕೇರಲು ಬೆಳಕು ಹಾದಿ ದೀಪದಂತೆ ಕಂದಾ
ಹಾಸ ಕಾರ್ಮೋಡಕೆ ಬಕ್ಷೀಸು ನೀಡಿ ದೂರ ಇಡುವುದಂತೆ ಕಂದಾ

ಮಂದಸ್ಮಿತ ಚಮತ್ಕಾರದಿ ಮನಸು ಸದಾ ಫ್ರಫುಲ್ಲವಂತೆ ಕಂದಾ
ಕಿರುನಗೆ ಧೈರ್ಯ ಚೈತನ್ಯಗಳನು ದೇಹ ಆಸ್ವಾದಿಸಿದಂತೆ ಕಂದಾ

ಗಹಗಹಿಸುಲು ಮೂಡಿದ ಶಬ್ಧ ಸುಮಧುರ ಸಂಗೀತದಂತೆ ಕಂದಾ
ಜೀವನವನು ಸವಿ ಜೇನಾಗಿಸಲು ಸುಹಾಸ ಸಾಧನವಂತೆ ಕಂದಾ

ಕೃಷ್ಣಾ! ಹಸನ್ಮುಖಿ ಮುಖದ ಚಹರೆ ವ್ಯಾಯಮ ಶಿಕ್ಷಕನಂತೆ ಕಂದಾ
ಕಂದನಲ್ಹಲಿಹ ಮುಗ್ಧ ಹಾಸ ಅಳವಡಿಸುವುದು ಒಳಿತಂತೆ ಕಂದಾ.


Leave a Reply

Back To Top