ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಇತರೆ

ಮಧುರಾಣಿ,

ಗಂಗಾಧರಯ್ಯ,

ಆಶಾ ರಘು,

ಸಬಿತಾ ಬನ್ನಾಡಿ,

ಡಾ. ಅಪ್ಪಗೆರೆ,

ಡಾ. ಎಂ.ಬಿ.ಕಟ್ಟಿ

ಕೃತಿಗಳಿಗೆ `ಅಮ್ಮ ಪ್ರಶಸ್ತಿ’

 ಸೇಡಂನಲ್ಲಿ ನ.೨೬ಕ್ಕೆ `ಅಮ್ಮ ಪ್ರಶಸ್ತಿ’ ಪ್ರದಾನ |

೨೨ ನೇ ವರ್ಷದ ಕಾರ್ಯಕ್ರಮ |

ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ಮಧುರಾಣಿ ಎಚ್.ಎಸ್.,  ಎಸ್.ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ.ಅಪ್ಪಗೆರೆ ಸೋಮಶೇಖರ ಮತ್ತು ಡಾ.ಎಂ.ಬಿ.ಕಟ್ಟಿ ಅವರ ಕೃತಿಗಳು ಆಯ್ಕೆಯಾಗಿವೆ ಎಂದು `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಧುರಾಣಿ ಎಚ್.ಎಸ್.ಬೆಂಗಳೂರು ಅವರ `ನೀಲಿ ಚುಕ್ಕಿಯ ನೆರಳು’ (ಕವನ ಸಂಕಲನ), ಎಸ್.ಗಂಗಾಧರಯ್ಯ ತುಮಕೂರು ಅವರ `ಮಣ್ಣಿನ ಮುಚ್ಚಳ’ (ಕಥಾ ಸಂಕಲನ), ಆಶಾ ರಘು ಅವರ `ಮಾಯೆ (ಕಾದಂಬರಿ), ಸಬೀತಾ ಬನ್ನಾಡಿ ಅವರ `ಇದಿರು ನೋಟ’ (ಅಂಕಣ ಬರಹ ಸಂಕಲನ), ಡಾ.ಅಪ್ಪಗೆರೆ ಸೋಮಶೇಖರ ಅವರ `ಬೆವರ ಬವಣೆ’ ಮತ್ತು ಡಾ.ಎಂ.ಬಿ.ಕಟ್ಟಿ ಅವರ `ಆರೂಢ ಪಂಥ’ (ಸಂಕೀರ್ಣ) ಕೃತಿಗಳನ್ನು ೨೨ ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಸಂಕೀರ್ಣ ವಿಭಾಗದಲ್ಲಿ ಇಬ್ಬರು ಲೇಖಕರು ಪ್ರಶಸ್ತಿಯನ್ನು ಹಂಚಿಕೊAಡಿದ್ದಾರೆ. ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಮ್ನ ಶ್ರೀ ಪಂಚಲಿAಗೇಶ್ವರ ದೇವಾಲಯದ ಶಾಂಭವಿ ರಂಗಮAಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿಗೆ ೨೨ ರ ವರ್ಷದ ಸಂಭ್ರಮ :

ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ’ಗೆ ಈಗ ೨೨ ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು `ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ.  ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ


One thought on “ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ `ಅಮ್ಮ ಪ್ರಶಸ್ತಿ’

  1. ಏಲ್ಲಾ ‘ಅಮ್ಮ ಪ್ರಶಸ್ತಿ’ ಪುರಸ್ಕೃತ ರಿಗೆ ಅಭಿನಂದನೆಗಳು.

Leave a Reply

Back To Top