ಕಾವ್ಯ ಸಂಗಾತಿ
ಅರಳುವ ಹೂಗಳು
ಅಕ್ಷತಾ ಜಗದೀಶ

ಮಗುವದು ಮಗುವಾಗಿರಲಿ
ಸಹಜತೆಯಲಿ ಅರಳುವ
ಹೂ ವಾಗಿರಲಿ…
ನಗುವಿರಲಿ ,ಅಳುವಿರಲಿ
ಸ್ವಚ್ಛಂದದಲಿ ಹಾರವ
ಬಾನಾಡಿಯಂತಿರಲಿ…
ಬಾಲ್ಯವದು ಮನದಲ್ಲಿ
ಪರಿಪೂರ್ಣ ವಾಗಲಿ
ಪ್ರದರ್ಶನದ ಛಾಯೆ
ಸುಳಿಯದಿರಲಿ…
ನಮ್ಮ ಸ್ವಾರ್ಥಕ್ಕೆ ಎಂದಿಗು
ನಿಸ್ವಾರ್ಥ ನಗು
ಮರೆಯಾಗದಿರಲಿ..
ಪುಟ್ಟ ಹೆಜ್ಜೆಯ ಗೆಜ್ಜೆಯನಾದ
ಎಂದು ಮಾಸದಿರಲಿ..
ಮಧುರ ಧನಿಯ ಇಂಪಾದ ನಾದ
ತಾನಾಗೆ ಹಾಗೆ
ಮೂಡಿ ಬರಲಿ…
ಹೊಳಪಿನ ಕಣ್ಣಿನ
ಕನಸಿನ ಬೆಳಕು
ಹೊಸ ದಿಗಂತಕ್ಕೆ
ಮುನ್ನುಡಿಯಾಗಲಿ…
ಹಾರಾಡಲಿ ಬಾನಾಡಿಯಂತೆ
ಈಜಾಡಲಿ ಮೀನಿನಂತೆ
ಆಸ್ವಾದಿಸಲಿ ಬಾಲ್ಯವನು
ಬಾಲ್ಯದಂತೆ..
ಮರಳಿ ಬಾರದ ಬಾಲ್ಯ
ಕಡಲಾಳದಲಿ ಇರುವ
ಅಮೂಲ್ಯ ಮುತ್ತಿನಂತೆ..
ನಾಳೆಯ ನಾಡಿನ
ಹೊಸ ಕನಸುಗಳು
ಹರಿವ ನದಿಯಾಗಲಿ..
ನಾಡಿನ ಭವ್ಯ ಸಂಸ್ಕೃತಿಯ
ಪ್ರತೀಕವಾಗಲಿ..
ಮುಗ್ದತೆಯ ಆ ನಗು
ಮಗುವಾಗಿರಲಿ
ಸಹಜತೆಯಲಿ ಅರಳುವ
ಹೂವಾಗಿರಲಿ….
Beautiful Akshata