ಅನುವಾದ ಸಂಗಾತಿ
ಬದುಕಿನ ವ್ಯತ್ಯಾಸ…!
ಮಲಯಾಳಂ ಮೂಲ:
ಬಾಷ ಮಮ್ಮು.
ಕನ್ನಡಕ್ಕೆ
ಐಗೂರು ಮೋಹನ್ ದಾಸ್ ಜಿ.
ಒರ್ವ
ನಿರಂತರ ಓಡುತ್ತಿರುತ್ತಾನೆ..!
ಮತ್ತೊರ್ವ ಸುಮ್ಮನೆ
ಸದಾ ನಿಂತಿರುತ್ತಾನೆ…!!
ಓಡುತ್ತಿದ್ದ ವ್ಯಕ್ತಿ
ನದಿ ದಾಟುತ್ತಾನೆ..!
ಅಪಾಯ ಅಳಗಳಿದ್ದ
ಸ್ಥಳಗಳಿಂದ ದೂರ ಸಾಗುತ್ತಾನೆ..!
ಮೀನುಗಳೊಂದಿಗೆ ತಮಾಷೆ
ನುಡಿಗಳನ್ನು ಹೇಳುತ್ತಿರುತ್ತಾನೆ…!!
ಬೆಟ್ಟ-ಗುಡ್ಡಗಳನ್ನು
ಏರುತ್ತಾನೆ..!
ಮರಗಳೊಂದಿಗೆ ‘ಕಥೆ’
ಹೇಳುತ್ತಾನೆ…!
ಎಲೆಗಳೊಂದಿಗೆ ‘ದಾರಿ’
ಕೇಳುತ್ತಾನೆ..!
ಹೂವುಗಳೊಂದಿಗೆ ಸಹ
‘ಜೇನು’ ಕೇಳುತ್ತಾನೆ…!!
ಆಕಾಶದತ್ತ
ಮೆಲ್ಲನೆ ಹಾರುತ್ತಾನೆ..!
ಮೇಘಗಳನ್ನು ಸ್ಪಶಿ೯ಸುತ್ತಾನೆ..!
ನಕ್ಷತ್ರಗಳ ಬಳಿ ಕುಳಿತು
‘ಬೆಳದಿಂಗಳು’ ನ್ನು ಪ್ರೀತಿಸುತ್ತಾನೆ…!!
ಈ ವೇಳೆ….
ನಿಂತುಕೊಂಡಿದ್ದ ವ್ಯಕ್ತಿ
ಬಹಳ ನಿರಾಸೆಗೊಂಡು
ಹೊಗೆಯಿಂದ ಕಪ್ಪು ಮಸಿಯಾಗಿರುವ
ಅಡುಗೆಕೋಣೆಯ ಕಿಟಕಿಯಿಂದ
ಓಡುತ್ತಿದ್ದ ಎಲ್ಲಾ ಮಂದಿಯನ್ನು
ನೋಡುತ್ತಾ ಮನನೊಂದು
ಸ್ವತಃ ಒದ್ದಾಡಿ ಬದುಕು
ಮುಗಿಸುತ್ತಾನೆ…!!!
ಮಲಯಾಳಂ ಮೂಲ: ಬಾಷ ಮಮ್ಮು.
ಕನ್ನಡ ಅನುವಾದ:
ಐಗೂರು ಮೋಹನ್ ದಾಸ್, ಜಿ.