ಕಾವ್ಯಸಂಗಾತಿ
ನಾಮದೇವ ಕಾಗದಗಾರ-ಹನಿಗವಿತೆ ಮತ್ತು ಚಿತ್ರಗಳು
ಸಮಾನತೆ
ಸಮಾನತೆ
1.
ನೆರಳೆ ಲಂಚ ಕೇಳುತ್ತಿದೆ
ಬದುಕು ದಿಕ್ಕಟ್ಟಿದೆ
ಮನಸ್ಸಿನ ಗೋರಿಯ ಮೇಲೆ
ಉಟ್ಟ ಬಟ್ಟೆಯೂ
ಬೆತ್ತಲಾಗಿ ನಿಲ್ಲಿಸಿದೆ..
2.
ಸಮಾನತೆಯ
ಮುಖವಾಡ ಹೊತ್ತ
ಮೈಲಿಗೆಯು
ಹೂವು ಗಿಡಗಳಿಗೆ
ನೀರುಣಿಸುತ್ತಿದೆ..
3.
ವಿಷ ಬೀಜ ಬಿತ್ತಿ
ಸಮಾನತೆಯ ಬೆಳಕು
ಹುಡುಕಿದರೆ
ಎಲ್ಲಿ ಸಿಗುತ್ತದೆ…
ಸಮಾಜ
ಉಸಿರುಗಟ್ಟಿ ಒದ್ದಾಡುತ್ತಿದೆ..
4.
ಸಮಾನತೆಯ
ಮುಖವಾಡದೊಳಗಿನ
ರಣ ಹದ್ದುಗಳು
ಜಾತಿ ರಕ್ತದ
ರುಚಿಗಾಗಿ
ಆರ್ಭಟಿಸುತ್ತಿವೆ…
5.
ಎದೆಯ ಹಣತೆಯಾದರೆ
ನಿಷ್ಕ್ರೀಯ ಸಮಾಜದ
ಕತ್ತಲನ್ನು ಹೋಗಲಾಡಿಸಬಹುದು..
ಆ ಹಣತೆಯಲ್ಲಿ ಸಮಾನತೆ,
ಜಾತ್ಯಾತೀತ ಎಣ್ಣೆ ಇದ್ದರೆ ಮಾತ್ರ
ಬದುಕಿನ ಕಟು ವಾಸ್ತವ ಸತ್ಯದ ಕವಿತೆ,ಅಭಿನಂದನೆಗಳು ಕಲಾವಿದರೇ.