ಮಾಸ್ತಿ ಬಾಬು-ನಮ್ಮ ಸುಂದರ ನಾಡು

ಕಾವ್ಯ ಸಂಗಾತಿ

ನಮ್ಮ ಸುಂದರ ನಾಡು

ಮಾಸ್ತಿ ಬಾಬು

ಬನ್ನಿರಿ ಮಕ್ಕಳೆ ಎಲ್ಲರು ಸೇರಿ ಕನ್ನಡ ಹಬ್ಬವ ಮಾಡೋಣ ಎಲ್ಲರ ಮನದಲಿ ಎಲ್ಲರ ಗುಣದಲಿ ಕನ್ನಡ ಭಾಷೆಯ ಬಿತ್ತೋಣ
ಕನ್ನಡೇತರರು ಕನ್ನಡ ಭಾಷೆಯ ಕಲಿಯುವಂತೆ ಮಾಡೋಣ

ಜ್ಞಾನಪೀಠವ ಪಡೆದ ಕವಿಗಳ ಸಾಧನೆಯನ್ನು ತಿಳಿಸೋಣ ಕನ್ನಡ ಮಣ್ಣಿನ ಕನ್ನಡ ಋಣವ ತೀರಿಸೊ ಬಗೆಯನು ಸಾರೋಣ

ನಮ್ಮಯ ನೆಲವು ನಮ್ಮಯ ಜಲವು ಶ್ರೇಷ್ಠತೆಯೆಂದು ತಿಳಿಸೋಣ ಕನ್ನಡಿಗರೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುತ ಬಾಳೋಣ

ಏನೇ ಆಗಲಿ ಏನೇ ಬರಲಿ ಒಗ್ಗಟ್ಟಿನಿಂದ ಬದುಕೋಣ ಮಾಸ್ತಿ ಎಂಬುದು ಕನ್ನಡ ಆಸ್ತಿಯು ಎಂಬುದನು ನಾವು ಅರಿಯೋಣ


14 thoughts on “ಮಾಸ್ತಿ ಬಾಬು-ನಮ್ಮ ಸುಂದರ ನಾಡು

  1. ಕರುನಾಡ ಮಕ್ಕಳಿಗಾಗಿ ಬರೆದ ಈ ಕವಿತೆ ಸುಂದರವಾಗಿರುವುದರ ಜೊತೆಗೆ ಅರ್ಥಗರ್ಭಿತವಾಗಿದ್ದು ಕನ್ನಡಾಭಿಮಾನವನ್ನು ಮೂಡಿಸುವ ಕವಿತೆಯಾಗಿದೆ.
    ನೇತ್ರಾ. ಎ
    ಶಿಕ್ಷಕಿ

    1. ಈ ಕವಿತೆ, ಕನ್ನಡಿಗರಲ್ಲಿ ಅಲ್ಲದೆ ಕನ್ನಡೇತರರಲ್ಲೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಆಶಯವನ್ನು ಹೊಂದಿದ್ದು‌ ನಾಡಿನ ಬಗ್ಗೆ ಬರೆದಿರುವ ಈ ಕವಿತೆಯನ್ನು ಹಾಡಿನ ಮೂಲಕ ಮಕ್ಕಳಿಗೆ ಪರಿಚಯಿಸಿದರೆ ಇನ್ನೂ ಚೆನ್ನಾಗಿರುತ್ತದೆ. ತಮ್ಮ ಈ ಕವಿತೆಗೆ ಅಭಿನಂದನೆಗಳು

      ವಿಶಾಲ್
      ಬೆಂಗಳೂರು

  2. ನಿಮ್ಮ ಕವಿತೆ ಸರಳವಾಗಿ ಕನ್ನಡ ಕ್ರಾಂತಿಯನ್ನು ಮಾಡಿದೆ .
    ಮಕ್ಕಳಜೊತೆ ಆಡುವ ತೆರದಲಿ ಕನ್ನಡಾಭಿಮಾನ ಸಾರಿದೆ

    ನಾಗೇಶ್ ಎ
    ಪೊಲೀಸ್ ಪಬ್ಲಿಕ್ ಶಾಲೆ

  3. ಅರ್ಥಗರ್ಭಿತವಾಗಿದ್ದು ನಿಮ್ಮ ಕನ್ನಡ ಅಭಿಮಾನ ಎತ್ತಿ ತೋರಿಸುತ್ತದೆ.
    ಲಕ್ಷ್ಮಿ
    ಐರ

  4. ಕನ್ನಡ ಸಾಹಿತ್ಯದ ಮೇಲಿನ ನಿಮ್ಮ ಪ್ರೀತಿಯನ್ನು ಮೆಚ್ಚುತ್ತೇನೆ

  5. ಮಕ್ಕಳಲ್ಲಿ ಕನ್ನಡ ಭಾಷಾಭಿಮಾನವನ್ನು ಬೆಳೆಸಬೇಕು ಎಂದು ವ್ಯಕ್ತಪಡಿಸುತ್ತದೆ.

    ಸ್ವಪ್ನ ಪಿ. ನಾಗನೂರ
    ಐರಾ ಅಕಾಡೆಮಿ

Leave a Reply

Back To Top