ಕಾವ್ಯ ಸಂಗಾತಿ
ದಾಸ ಶ್ರೇಷ್ಟ ಕನಕದಾಸ
ಪ್ರೊ ರಾಜನಂದಾ ಘಾರ್ಗಿ
ಕೃಷ್ಣ ಪರಮಾತ್ಮನ ಪರಮ ಭಕ್ತನಾದ
ಭಕ್ತಿ ಜ್ಞಾನ ವೈರಾಗ್ಯ ಬೋಧಿಸಿದ
ಸತ್ಪುರುಷರ ಸಂಗದ ಮಹಿಮೆ ತಿಳಿಸಿದ
ಜಗಕ್ಕೆ ನುಡಿ ಮುತ್ತುಗಳನ್ನು ಬಿತ್ತರಿಸಿದ
ಕುಲದ ಹೆಸರಲಿ ಬೀಗುವ ಅಹಂ ಕತ್ತರಿಸಿದ
ತಲ್ಲಣಿಸುವ ಮನಗಳನ್ನು ಸಂತೈಸಿದ
ಅಹಂಕಾರ ಡಾಂಬಿಕತನ ಬೇಡವೆಂದ
ಕಾಮಕ್ರೊಧಗಳ ಬಿಟ್ಟಾಗ ಮಡಿ ಎಂದ
ಸಮಾನತೆಯ ತತ್ವ ಸಿದ್ಧಾಂತ ಸಾರಿದ
ಮಾನವತೆಯ ಮಹಾ ದೀಪ ಬೆಳಗಿದ
ದೈವತ್ವಕ್ಕೆ ಏರುವ ದಾರಿ ತೊರಿದ
ಭಕ್ತಿ ಪಂಥದ ಮಹಾ ಹರಿಕಾರನಾದ
ಶ್ರೀ ಕನಕದಾಸ ದಾಸರಲ್ಲಿ ಶ್ರೇಷ್ಟನಾದ
ತನ್ನ ಕೃತಿ ಕೀರ್ತನೆಗಳಲ್ಲಿ ಜೀವಂತನಾದ
ಭಕ್ತಿ ಪಂಥದ ಹೆಮ್ಮೆಯ ಹರಿಕಾರನಾದ
ದಾಸ ಪರಂಪರೆಯ ದಂಡನಾಯಕನಾದ