ಹನಿಕವಿತೆಗಳು-ನಾಮದೇವ ಕಾಗದಗಾರ

ಕಾವ್ಯಸಂಗಾತಿ

ಚಿತ್ರಗಳು/ ಹನಿಗವಿತೆಗಳು:
ನಾಮದೇವ ಕಾಗದಗಾರ

ಜಾತೀಯತೆಯ ಮಾಯೆಯೊಳಗೆ…

ಜಾತೀಯತೆಯ ಮಾಯೆಯೊಳಗೆ

1.
ಜಾತಿ ಧರ್ಮಗಳ ವಿಷಜಾಲದಲ್ಲಿ
ಕೆಡವಿ ಕೇಕೆ ಹಾಕುತ್ತಿದ್ದಾರೆ..!
ನೆತ್ತರು ಹೀರುತ್ತಾ
ದೇಹ ಕಚ್ಚಿದ ಜಿಗಣೆಗಳಂತೆ..!!

2.
ಕಲ್ಲೆಸೆಯದಿರಿ
ಜಾತೀಯತೆಯ ಗೂಡಿಗೆ….
ಕಾರಣ ಅದು ಗಾಜಿನಂತೆ
ಒಡೆದರೆ ಜೋಡಿಸಲಾಗದು…

3.
ಮನುಷ್ಯರಾದವರು
ಮುಂದೆ ಬನ್ನಿ, ನಿಮ್ಮ
ಹೃದಯಕ್ಕೆ ನನ್ನೆರಡು
ಕಣ್ಣು ದಾನ ಮಾಡುವೆ..
ಕೋಮಾದಲ್ಲಿದ್ದ ಕಣ್ಣುಗಳು
ನಿಶ್ಚಳವಾಗಬಹುದೇನೋ…
ಮಾನವೀಯತೆ, ಜಾತೀಯತೆ
ಮೇಲೆ ಬೆಳಕು ಚೆಲ್ಲಬಹುದೆಂಬ
ನಂಬಿಕೆಯಿಂದ..

4.
ಲೋಕ ಜಾತಿ
ವೈಷಮ್ಯದಿಂದ
ಒಣಗುತ್ತಿದೆ..

ನಿಮ್ಮ ಬಳಿ
ನಾವು ಮನುಜರು
ಎಂಬ ಹನಿ ನೀರಿದ್ದರೆ
ಬಿಡಿ…

5.
ನಾನು ಕೊಚ್ಚಿಹೋಗಿರುವೆ
ಎಂದೂ ಆರದಿರುವ
ಜಾತಿಯತೆಯ ಕುಲುಮೆಯಲ್ಲಿ..
ಇಲ್ಲಿ ಕಿಚ್ಚು ಹಚ್ಚುತ್ತಿರುವರ
ಮಧ್ಯ ಬದುಕಿ ನಿಂತಿದ್ದೇನೆ..


Leave a Reply

Back To Top