ಕಾವ್ಯ ಸಂಗಾತಿ
ಆಸೀಫಾ
ಗಜಲ್
ನನ್ನಿಂದ ನೀ ದೂರ ಇದ್ದರೂ ತುಂಬಾ ನೆನಪಾಗ್ತೀಯ
ನೆನಪಿಂದ ನೆನಪು ಕಿತ್ತೆಸೆದರೂ ತುಂಬಾ ನೆನಪಾಗ್ತೀಯ
ಅತಿಯಾಗಿ ನಿನ್ನ ಇಷ್ಟಪಟ್ಟಿದ್ದೇ ಮಹಾ ಅಪರಾಧವೇನು
ಮನಸಿಗೆಷ್ಟು ಬೇಡವೆಂದರೂ ತುಂಬಾ ನೆನಪಾಗ್ತೀಯ
ಇರಿದಂತೆ ಚೂರಿ,ಚಿವುಟಿದಂತೆ ಹೃದಯ ಬಲು ಸಂಕಟ
ಯೋಚನೆ ಪಲ್ಲಟಗೊಳಿಸಿದರೂ ತುಂಬಾ ನೆನಪಾಗ್ತೀಯ
ಮಧುರ ಕ್ಷಣಗಳು ಆವರಿಸಿ ಹಿಂಸಿಸಿ ಕೊಲ್ಲುತಿವೆ ನನ್ನ
ಅಂಗಲಾಚಿ ಬೇಡಿಕೊಂಡರೂ ತುಂಬಾ ನೆನಪಾಗ್ತೀಯ
ಮಾಸಿದಂತೆ ಕಾಣುತಿಲ್ಲ,ಆತ್ಮಹೊಕ್ಕ ಆತ್ಮೀಯತೆ ಇದು
ಮನದಿ ದ್ವೇಷ ಹುಟ್ಟು ಹಾಕಿದರೂ ತುಂಬಾ ನೆನಪಾಗ್ತೀಯ
ನಿನ್ನುಸಿರು ತುಂಬಿಕೊಂಡ ಒಲವಿದು ಬಸಿರಾಗಿದೆ ನೋಡು
ಭಾವನೆಗಳೆಲ್ಲಾ ಬರಿದಾಗಿಸಿದರೂ ತುಂಬಾ ನೆನಪಾಗ್ತೀಯ
ಕುಡಿನೋಟದ ಕನ್ನಿಕೆ ನೀನೆ ಆಸೀ ಎಂದಿದ್ದು ಮರೆತೆಯೇನು
ಪ್ರೇಮಕಾವ್ಯದ ಪುಟಗಳು ಅರಿದರೂ ತುಂಬಾ ನೆನಪಾಗ್ತೀಯ
ನೆನಪಾಗುತ್ತಲೇ ಇರುವ ಪ್ರಿಯಕರನನ್ನು ನೆನೆನೆನೆದು ಉಸುರಿದ ಪ್ರಿಯಳ ಉತ್ಕಂಟ ಪ್ರೇಮದ ನುಡಿಗಳು!
ಅದ್ಭುತವಾದ ಪ್ರೇಮ ನಿವೇದನೆ. ಚೆನ್ನಾಗಿದೆ
ನಿಜ