ಜಯಂತಿ ಸುನಿಲ್ ಕವಿತೆ-ದಿಕ್ಕು ಬದಲಿಸಿದ ಕಾಲ

ಕಾವ್ಯಸಂಗಾತಿ

ಜಯಂತಿ ಸುನಿಲ್

ದಿಕ್ಕು ಬದಲಿಸಿದ ಕಾಲ

ನಸುಜಾವ ತೆರೆದ ಬಾವಿಯಲಿ ಬಗ್ಗಿ ಸರಸರನೆ ನೀರು ಸೇದುವ ಕೈಗಳು ಕಾಣೆಯಾಗಿವೆ..
ಖಾಲಿ ಕೂತ ಕೊಡಗಳು ಖಾಲಿ ಭಾವವನ್ನು ತುಂಬಿಕೊಳ್ಳುತ್ತಿವೆ..!!

ಅಂಗಳಕ್ಕೆ ಮುಷ್ಠಿಗಾತ್ರದ ಸಗಣಿ ತೋರಿಸಿ..ಸಾರಿಸಿ,ಗುಡಿಸಿ ಚಿತ್ತಾರ ಬಿಡಿಸುವ ಕೈಗಳು ಕಾಣೆಯಾಗಿವೆ…
ಅಳಿಸಲಾಗದ ನಕಲಿ ಚಿತ್ತಾರಗಳು ಎದ್ದು ಕುಂತಿವೆ..!!

ಮನೆಯ ಹಿತ್ತಲಲ್ಲಿ ಅರಳಿ ನಿಂತ ಮಲ್ಲಿಗೆ, ಸಂಪಿಗೆ ಹೂಕೊಯ್ದು ದೇವರ ಪಾದಕ್ಕಿಡುವ ಕೈಗಳು ಕಾಣೆಯಾಗಿವೆ…
ಬಾಗಿಲು ತೋರಣ,ದೇವರ ಪಟಗಳಲ್ಲಿ ಪ್ಲಾಸ್ಟಿಕ್ ಹೂಗಳು ಅರಳಿ ನಗುತಿವೆ..!!

ಭತ್ತದ ಮೇಲೆ ಒನಕೆಯಾಡಿಸಿ ಮೊರದಲ್ಲಿ ಅಕ್ಕಿಯ ಆರಿಸಿ ಅಡುಗೆ ಮಾಡಿ ಮನೆಮಂದಿಗೆ ಬಡಿಸುವ ಕೈಗಳು ಕಾಣೆಯಾಗಿವೆ…
ಸಿದ್ಧ ಅಡುಗೆಗಳು ಮನೆಯ ಕಾಲಿಂಗ್ ಬೆಲ್ ಒತ್ತುತ್ತಿವೆ..!!

ಸಂಸಾರದಲ್ಲಿ ನಯನಾಜೂಕಿನ ಹಾಲುಕ್ಕಿಸುವ ಹಸನಾದ ಕೈಗಳು ಕಾಣೆಯಾಗಿವೆ..
ಮನೆಯೊಂದು ಮೂರು ಬಾಗಿಲಾಗಿ,ಕವಲೊಡೆದ ಮನೆಯಲ್ಲಿ ಬಾಗಿಲುಗಳು ಬಿಂಕವಾಗಿವೆ..!!

ಹರಟೆ, ಸಿಟ್ಟು ಓಲೈಸುವಿಕೆಯ ಕೂಡು ಕುಟುಂಬದ ಕುರುಹುಗಳು ಕಾಣೆಯಾಗಿವೆ…
ಚಿಕ್ಕ ಸಂಸಾರ, ಚೊಕ್ಕ ಸಂಸಾರ ಎಂಬ ಘೋಷವಾಕ್ಯಗಳು ಚಾಲ್ತಿಯಲ್ಲಿವೆ..!!

ಜತನವಾಗಿಟ್ಟುಕೊಂಡ ಹಿರಿಯರ ಪಾರಂಪರಿಕ ಕಟ್ಟುಪಾಡುಗಳು ಕಾಣೆಯಾಗಿವೆ..
ಸಾಮಾಜಿಕ ಕೌಟುಂಬಿಕತೆಯ ಲಕ್ಷಣಗಳು ಕೈಹಿಡಿದು ನಿಲ್ಲಿಸುವ ತಲ್ಲಣಗಳಾಗಿವೆ..!!

5 thoughts on “ಜಯಂತಿ ಸುನಿಲ್ ಕವಿತೆ-ದಿಕ್ಕು ಬದಲಿಸಿದ ಕಾಲ

  1. ಮಾಡಿದ್ದೇನೆ,ಮಾಡುತ್ತಲೂ ಇದ್ದೇನೆ.ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ

Leave a Reply

Back To Top