ಕಾವ್ಯ ಸಂಗಾತಿ
ಮತ್ತೆ ಹುಟ್ಟಿ ಬಾ ಬಾಬಾ
ನರಸಿಂಗರಾವ ಹೇಮನೂರ
ಕ್ಷಮಿಸಿ ಬಿಡ್ರಿ ಬಾಬಾ,
ನಿಮ್ ಆದರ್ಶ ನಾವು ಪಾಲಿಸಲಿಲ್ಲ,
ನೀವು ಎಣಿಸಿದ ಮಟ್ಟಕ್ಕ ನಾವು ಬರಲೇ ಇಲ್ಲ
ಏನೆಲ್ಲ ಮಾಡಿದ್ರಿ ನಮ್ಮ್ ಉದ್ಧಾರಕ್ಕ
ಸಂವಿಧಾನ ಬರದ್ರಿ, ಕಾನೂನ ತಂದ್ರಿ,
ಮೀಸಲಾತಿ ಕೊಟ್ರಿ,
ಆದ್ರೂ ನಾವು ನಾವೇ ಆಗಿ ಉಳದ್ವಿ,
ಉದ್ಧಾರ ಆಗ್ಲಿಲ್ಲ, ಸಿಕ್ಕಷ್ಟಕ್ಕೇ ತೃಪ್ತಿ ಪಟ್ವಿ,
ಮ್ಯಾಲೇರ್ಲಕ ಏಣೀ ಕೊಟ್ರೂ
ಏರಲಾರ್ದ ಕೆಳಗ~ ಒದ್ದಾಡತೀವಿ
ನೀವು ಹೇಳಿದ ಶಿಕ್ಷಣ, ಸಂಘಟನೆ, ಹೋರಾಟ
ಈಗ ಬ್ಯಾರೆ ದಾರಿ ಹಿಡದಾವ,
ನಿಮ್ ಹೆಸರ ಹೇಳ್ಕೋತ ಉದ್ಧಾರಾದವ್ರು,
ಮ್ಯಾಲೇರಿದವ್ರು, ಕೆಳಗ ನೋಡ್ತಾನೆ ಇಲ್ಲ
ಯಾವುದ್ಯಾವದಕ್ಕೋ ನಿಮ್ ಹೆಸರಿಟ್ಟು
ಸಿಕ್ಕಷ್ಟು ಸುಲೀಲಿಕತ್ತ್ಯಾರ,
ಚೌರಸ್ತಾದಾಗ ನಿಮ್ ಮೂರ್ತಿ ಕೂಡ್ಸಿ
ಹಾರ ಹಾಕಿ ನಿಮ್ಮನ್ನ ಹಾಡಿ ಹೊಗಳ್ತಾರ
ತಮ್ಮ ಕೆಲ್ಸ ಆಗೋದಕ್ಕಷ್ಟ~ನಿಮ್ಮನ್ನ ನೆನಸ್ತಾರ
ರಾಜಕೀ ಅಂಬೋದು ಗೊಂದಲದ ಗೂಡಾಗ್ಯಾದ
ಆದರ್ಶ್, ನೀತಿ, ಗಾಳಿ ಪಾಲಾಗ್ಯಾವ
ಈಗ ನೀವು ಇರ್ಬೇಕಾಗಿತ್ತು ಬಾಬಾ
ನಮ್ಮ ಉದ್ಧಾರಕ್ಕ ನೀ ಮತ್ತ ಹುಟ್ಟಿ ಬಾ ಬಾಬಾ
ಮತ್ತೆ ಹುಟ್ಟಿ ಬಾ.