ಮಮತಾ ಶಂಕರ್ ಕವಿತೆ-ಮೂಡದ ರೆಕ್ಕೆಗಳು

ಕಾವ್ಯ ಸಂಗಾತಿ

ಮೂಡದ ರೆಕ್ಕೆಗಳು

ಮಮತಾ ಶಂಕರ್

ಪಕ್ಕೆಯ ಇಕ್ಕೆಲಗಳಲ್ಲೂ
ಕನಸುಗಳ ರೆಕ್ಕೆಗಳು ಮೂಡುತ್ತಿದ್ದುದು
ನನಗೆ ಬೆರಗು….

ಅರಳು ಗಣ್ಣುಗಳ ನೋಡುತ್ತಾ
ಅವರೇನೋ ಅಂದರು….
ರೆಕ್ಕೆಗಳ ಟ್ರಿಮ್ ಮಾಡಿದರೆ
ಚಂದ ಕಣೇ
ನೀಲಿ ನವಿಲ ಕಣ್ಣಂತವಳೇ ಎಂದು…
ಬೆದರಿದ ನಾನು ರೆಕ್ಕೆಗಳ ಮೂಡಿಸದೇ
ಒಳಗೆ ಬಚ್ಚಿಟ್ಟುಬಿಟ್ಟೆ

ಕರಗುವ ಸಕ್ಕರೆ ಕಡ್ಡಿಗಳಂತ,
ಜೊಲ್ಲು ಸುರಿಯುವ ಕಂದು
ಚಾಕೊಲೇಟ್ಗಳಂತ ಏನೇನೋ
ಹಿಡಿದು ಬಾಯಿ ಸಿಹಿ ಮಾಡಿದರು

ಬೆಳೆದ ಮಕ್ಕಳು, ಹೊಳೆದ ಗಂಡ
ನನ್ನ ನೆತ್ತಿ ಸವರುವಂತಾದಾಗ
ನನ್ನನ್ನು ಯಶಸ್ವಿ ಎಂದರು

ಬಾಯ ಸಿಹಿ ಕರಗಿ ಎಚ್ಚರಾಗಿ
ಕನಸ ರೆಕ್ಕೆಗಳ ನೆನಪಾಗಿ
ಮಂಜು ಕಣ್ಣ ತೆರೆದೆ
ಪಕ್ಕೆ ಸವರಿಕೊಂಡೆ

ಮೂಡದ ರೆಕ್ಕೆಗಳ ಬೆಳೆಸಲೇ ಇಲ್ಲ
ಎಂದು ಕಣ್ಣು ಹನಿಯಾಯಿತು…
ನೆನಪುಗಳೆಲ್ಲ ಗಾಳಿಯಲ್ಲಿ
ತೂರಿ ಹೋದವು….
ಹಿಡಿಯಲಾಗದೆ ನೋಡುತ್ತಾ ನಿಂತೆ
ನಭದ ನಕ್ಷತ್ರಗಳಾಗಿ
ಕಣ್ಣು ಮಿಟುಕಿಸಿ ನಕ್ಕವು….


8 thoughts on “ಮಮತಾ ಶಂಕರ್ ಕವಿತೆ-ಮೂಡದ ರೆಕ್ಕೆಗಳು

    1. ಧನ್ಯವಾದಗಳು ಹಮೀದಾ ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ

      1. ಮೂಡದ ಕನಸುಗಳಿಗಾಗಿ ಎದೆ ನೋವಾಯಿರು
        ಮೂಡದ ಕನಸುಗಳಿಫ಼ಾಗಿ ಎದೆ ನೋವಾಯಿತು
        ತುಂವಾ ಚೆಂದ್ದಾದ ಕವಿತೆ
        ಧನ್ಯವಾದಗಳು ಮೇಡಮ್

        ಯಮುಬಾ

Leave a Reply

Back To Top