ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾನು ಹಾರಲೇ ಬೇಕು….

ಹಮೀದಾ ಬೇಗಂ ದೇಸಾಯಿ

ಅದೇಕೋ ಹಾರಲಾಗುತ್ತಿಲ್ಲ
ರೆಕ್ಕೆಗಳಿದ್ದರೂ
ಗರಿಗಳು ಬಿಚ್ಚುತ್ತಿಲ್ಲ
ಮುದುಡಿಕೊಂಡು…
ಬಿಗಿದಿದೆ ಕಾಲುಗಳ
ಯಾವುದೋ ಸರಪಳಿ
ಏಳದೆ ಕಚ್ಚಿಕೊಂಡಿವೆ
ಕಾಲುಗಳು ನೆಲಕೆ
ಗಗನದೆಡೆಗೆ ಉಡ್ಡಯನ ಮಾಡಿದರೂ
ಮತ್ತೆ ಭುವಿಗೊರಗುತ್ತೇನೆ…

ಹೌದು , ರೆಕ್ಕೆಗಳೆಲ್ಲವೂ
ಮೊಂಡಾಗಿವೆ ತುಕ್ಕು ಹಿಡಿದಂತೆ
ಹಾರದಂತೆ ಇದ್ದಲ್ಲೇ
ಫಡಫಡಿಸುತ್ತಿವೆ..
ಇಲ್ಲ , ಬೆಳೆಯಲೇಬೇಕು ಛಲದಿ
ಅಗಲವಾಗಿ ರೆಕ್ಕೆಗಳು
ಕಳಚಿ ಬೀಳಲೇಬೇಕು ಹಟದಿಂದ
ಬಿಗಿದ ಸರಪಳಿಯ ಕೊಂಡಿಗಳು…

ನಾನು ಹಾರಲೇಬೇಕು
ಗರಿಗೆದರಿ ವಿಶಾಲವಾಗಿ
ಆಗಸದ ತುಂಬ ಸಂತಸದಿ
ಸ್ವಚ್ಛಂದವಾಗಿ…


About The Author

2 thoughts on “ಹಮೀದಾ ಬೇಗಂ ದೇಸಾಯಿ-ನಾನು ಹಾರಲೇ ಬೇಕು….”

Leave a Reply

You cannot copy content of this page

Scroll to Top