ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗ್ರಹಣ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಸೂರ್ಯಗ್ರಹಣ ಚಂದ್ರಗ್ರಹಣ
ಬುದ್ಧಿಯ ಸುತ್ತ ಮನದ ಭ್ರಮಣ
ಮಾನವರಿಗೆ ಭಯದ ಆವರಣ
ಪಶುಪಕ್ಷಿ ಪ್ರಾಣಿಗಳಿಗಿಲ್ಲ ಗ್ರಹಣ

ಅದ್ಭುತ ನಭೋಮಂಡಲದಲಿ
ರವಿ ಶಶಿಯರ ಕತ್ತಲೆ ಬೆಳಕಿನಾಟ
ಕಂಡು ಹಿಡಿದು ಚಪ್ಪಾಳೆ ತಟ್ಟಿದ
ಖಗೋಳ ವಿಜ್ಞಾನಿ ಅತ್ರಿ ಮಹರ್ಷಿ

ಭವಿಷ್ಯಗಾರರಿಗೆ ಇದು ಆಕರ್ಷಣ
ಕಲುಷಿತೊಳಿಸಿದರು ವಾತಾವರಣ
ರಾಶಿಚಕ್ರಗಳಲಿ ಮುಣುಗಿದರು
ಭವಿಷ್ಯದ ಭಯ ಹುಟ್ಟಿಸಿದರು

ರಾಹು ಕೇತುಗಳ ಚೆಲ್ಲಾಟ
ಗುರು ಶುಕ್ರರ ಸ್ಥಾನಪಲ್ಲಟ
ಬುಧ ಮಂಗಳರ ಮಂಗಾಟ
ಭವಿಷ್ಯ ಕೇಳಿ ನಲುಗಿದ ಬಡಜೀವಿ

ಶಾಂತಿ ಖರ್ಚಿಗಾಗಿ ಹೊಡೆದಾಟ
ಬಡವಬಲ್ಲಿದರಿಬ್ಬರ ಅಲೆದಾಟ
ಪೂಜಾರಿಗಳಿಗೆ ಹಣದ ಊಟ
ದಾನ ಧರ್ಮದ ಹಬ್ಬದ ಕೂಟ

ಸ್ನಾನ ಊಟ ಎಲ್ಲವೂ ಬಂದ್
ಗುಡಿ ಗುಂಡಾರಗಳೂ ಬಂದ್
ದರ್ಗಾ ಚರ್ಚಗಳಿಗೆ ಬಂಧನವಿಲ್ಲ ತುಳಸಿದರ್ಭೆನದಿಸ್ನಾನ ಪುಣ್ಯಫಲ

ಹೊಟ್ಟೆಗಾಗಿ ಹುಲುಮಾನವನಾಟ ಕಂಡು ಪಕ ಪಕನೆ ನಕ್ಕುಬಿಟ್ಟರು
ಸೂರ್ಯಚಂದ್ರರು ಮಾನವನ
ಗ್ರಹಣ ಬಿಡಿಸಿ ಬೆಳಕ ನೀಡಿದರು


About The Author

1 thought on “ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ-ಗ್ರಹಣ”

Leave a Reply

You cannot copy content of this page

Scroll to Top