ಕಾವ್ಯ ಸಂಗಾತಿ
ಗಜಲ್
ರತ್ನರಾಯಮಲ್ಲ


ಮನ ಬೆತ್ತಲಾಗುತಿದೆ ನಿನ್ನಲ್ಲಿ ಲೀನವಾಗಲು ಸಿಂಹಿಣಿ
ಕನಸು ಗರಿಗೆದರುತಿದೆ ನಿನ್ನಲ್ಲಿ ಒಂದಾಗಲು ಸಿಂಹಿಣಿ
ಬೆಳಕಲ್ಲು ಕತ್ತಲು ಆವರಿಸಿದೆ ನಿನ್ನ ಅಂದವ ಕಂಡು
ಭಾವವು ಉನ್ಮಳಿಸುತಿದೆ ನಿನ್ನಲ್ಲಿ ಬೆಳಗಲು ಸಿಂಹಿಣಿ
ಕಂಗಳು ಮೈಮಾಟ ಸವಿಗಾಗಿ ನೀಲನಕ್ಷೆ ಹಾಕುತಿವೆ
ಹೃದಯ ಬಯಸುತಿದೆ ನಿನ್ನಲ್ಲಿ ಮುಳುಗಲು ಸಿಂಹಿಣಿ
ನಿನ್ನ ಆಲಿಂಗನವಿಲ್ಲದೆ ಹಾಸಿಗೆ ಅನಾಥವಾಗಿ ಬಿದ್ದಿದೆ
ಜೀವರಸವು ಚಿಮ್ಮುತಿದೆ ನಿನ್ನಲ್ಲಿ ಕರಗಲು ಸಿಂಹಿಣಿ
ಮಲ್ಲಿಗೆ ಅರಳಲು ನಿನ್ನ ಕಾವಿನ ಸರಸವು ಬೇಕಾಗಿದೆ
ನಾಳೆಯು ಕಾಣಿಸುತ್ತಿದೆ ನಿನ್ನಲ್ಲಿ ಅರಗಲು ಸಿಂಹಿಣಿ
ಅದ್ಭುತ ರಚನೆ !!