ಕರ್ನಾಟಕ ರಾಜ್ಯೋತ್ಸವ ವಿಶೇಷ
ಮತ್ತೆ ಮೊಳಗಲಿ ಕನ್ನಡ ದುಂದುಬಿ
ಡಾ. ನಿರ್ಮಲ ಬಟ್ಟಲ

ಹತ್ತು ಹಲವು
ಸವಾಲುಗಳು ಸುತ್ತ
ಮೀರಿ ಮೊಳಗಬೇಕಿದೆ
ಕನ್ನಡ ದುಂದುಭಿ ಮತ್ತೆ ಮತ್ತೆ…
ಕಾಡುವ ಅಂಗ್ರೇಜಿಯ
ವ್ಯಾಮೋಹ ಮುಂದೆ
ಹೇರಿಕೆಯಾಗುವ
ಹಿಂದಿಯು ಬೆನ್ನ ಹಿಂದೆ
ನಡುಮದ್ಯ ಸಿಲುಕಿ ಕನ್ನಡ
ನಲುಗದಂತೆ ಕಾಪಾಡೋಣ
ಅಭಿಮಾನದಿಂದ ಕನ್ನಡ
ಮಾತಾಡೊಣ….
ಗುಡುಗಬೇಕು ಕನ್ನಡ
ಗುಂಡಿಗೆಯ ಭಾಷೆಯಾಗಿ
ಮೊಳಗಬೇಕು ಕನ್ನಡ
ಕಹಳೆ ನಾದವಾಗಿ ಗಡಿಯಾಚೆಗೂ
ಅನ್ನದ ಭಾಷೆಯಾಗಿಸಲು
ಬಲಪಡಿಸಬೇಕು ಕನ್ನಡವ
ಸ್ವಾಭಿಮಾನದಿ ಕನ್ನಡವ
ಕಲಿಸೋಣ
ಹೆದರಬೇಕಿಲ್ಲ ಕಲಿಸದಿದ್ದರೆ
ಪ್ರಥಮ ಭಾಷೆಯಾಗಿ ಶಾಲೆಯಲಿ
ಕಳವಡಪಡಬೇಕಿಲ್ಲ
ಮಾತಾಡಲು ಹಿಂಜರಿದರೆ ನಗರದಲಿ
ಜೋಪಡಿಯಲಿ ತಾಯಿ ಹಾಡುವ
ಜೋಗುಳದ ಲಾಲಿಯಲಿ
ಹಳ್ಳಿಯಂಗಳದಿ ಕುಳಿತು
ಅಜ್ಜಿಯ ಸೋಬಾನೆ ಪದಗಳಲಿ
ಹಳ್ಳಿ ಗುಡಿಸಲಿನಲ್ಲಿ ಕೂಗುವ
ಮುಂಗೋಳಿಯ ಕೊರಳಲ್ಲಿ
ವಸಂತದಿ ಉಲಿವ
ಕೋಗಿಲೆಯ ಕಂಠದಲ್ಲಿ
ಅಂಬಾ ಎಂದು ಕರೆವ
ಕೊಟ್ಟಿಗೆ ಕರುವಿನ ದನಿಯಲ್ಲಿ
ನಲಿಯುತ್ತ ಸದಾ ಮೊಳಗುತ್ತದೆ
ಕನ್ನಡಿಗರಾಗಿ ಕನ್ನಡ ದುಂದುಭಿ
ಮತ್ತೆ ಮತ್ತೆ ಮೊಳಗಿಸೊಣ
———————————-
ಡಾ. ನಿರ್ಮಲ ಬಟ್ಟಲ
