ಕನ್ನಡವೇ ಸತ್ಯ ಕನ್ನಡವೇ ನಿತ್ಯ..!!

ಲೇಖನ ಸಂಗಾತಿ

ಕನ್ನಡವೇ ಸತ್ಯ ಕನ್ನಡವೇ ನಿತ್ಯ..!!

ಅನುಸೂಯಜಹಗೀರದಾರ

ಕನ್ನಡವೇ ಸತ್ಯ ಕನ್ನಡವೇ ನಿತ್ಯ..!!

ಕರ್ನಾಟಕದ ಇತಿಹಾಸ :

 1.ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.

 2.ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.

 3.ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.

 4.ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.

5.ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.

 6.ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.

7.ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ

8.ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.

9.1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.

10.ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.

11.ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.

12.1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.

13.ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

14.ಕುಮಾರವ್ಯಾಸ ನ ಕಾವ್ಯ ಗದುಗಿನ ಭಾರತ ಅಥವಾ ಕರ್ಣಾಟ ಭಾರತ ಕಥಾ ಮಂಜರಿ ಆಗಿದೆ.

15.ನಮ್ಮ ಕನ್ನಡ ಸಾಹಿತ್ಯ ವೃಕ್ಷದಂತೆ ಅನೇಕ ಶಾಖೋಪಶಾಖೆಗಳನ್ನು ಹೊಂದಿದ್ದು ವಿಪುಲವೂ ಸಬಲವೂ ಆದ ಸಮೃದ್ಧ ಸಾಹಿತ್ಯವಾಗಿ ಕಂಗೊಳಿಸಿದೆ.

ನಮ್ಮ ಕನ್ನಡ ಪರಂಪರೆ ನಮ್ಮ ಹೆಮ್ಮೆ.

ನಮ್ಮ ಸಂಸ್ಕೃತಿ ನಮ್ಮ ಗರಿಮೆ

ನಮ್ಮ ಭಾಷೆ ನಮ್ಮ ಹೆಗ್ಗಳಿಕೆ.


ಅನುಸೂಯಜಹಗೀರದಾರ

Leave a Reply

Back To Top