ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಬೆಳಗಾವಿ-ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)

ಯಿಂದ ಕನ್ನಡ ಕಾವ್ಯ ಪ್ರಕಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ  ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ರಾಜ್ಯ ಪ್ರಶಸ್ತಿಗಾಗಿ 2021 ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ

          ಪ್ರಶಸ್ತಿಯು ರೂ 10000/-(ರೂ ಹತ್ತು ಸಾವಿರ ) ನಗದು ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ

ವಯಸ್ಸಿನ ಯಾವುದೇ ನಿರ್ಬಂಧವಿಲ್ಲ ಹೊರನಾಡಿನ ಕನ್ನಡ ಕವಿಗಳು ಕೂಡ ಭಾಗವಹಿಸಬಹುದು ಕವಿ ಕರ್ಕಿಯವರ ಜನ್ಮದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು

ಆಸಕ್ತ ಕವಿಗಳು ತಮ್ಮ ಸ್ವರಚಿತ 2021 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಕವನ ಸಂಕಲನದ ನಾಲ್ಕು ಪ್ರತಿಗಳನ್ನು

            ಅಧ್ಯಕ್ಷರು

ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)

ಚಂದ್ರನಂದಾ # 2712 ಸೆಕ್ಟರ್ ನಂ 12

ಮಹಾಂತೇಶ ನಗರ

ಬೆಳಗಾವಿ-590017

          ಇಲ್ಲಿಗೆ ದಿನಾಂಕ 12/11/2022 ರ ಒಳಗಾಗಿ ಕಳುಹಿಸಲು ಕೋರಲಾಗಿದೆ ಹೆಚ್ಚಿನ ವಿವರಗಳಿಗಾಗಿ 8453500025,9901251436 ಸಂಪರ್ಕಿಸುವುದು.

Leave a Reply

Back To Top