ಕಾವ್ಯಸಂಗಾತಿ
ಗಜಲ್
ಕವಿತಾ ಹಿರೇಮಠ
ಅವನು ಮೌನವಹಿಸಿದಾಗ ಹೇಗೆ ಬರೆಯಲಿ ನಾನು
ಉಸಿರು ಕಟ್ಟಿದ ಧ್ವನಿಯಲ್ಲಿ ಹೇಗೆ ಹಾಡಲಿ ನಾನು
ಕಲ್ಪನೆಯ ಲೋಕದಲ್ಲಿ ಒಂಟಿಯಾಗಿ ಅಲೆಯುತ್ತಿದ್ದೇನೆ
ಕಿರಿಕಿರಿ ಎಂದು ದೂರ ಸರಿದವನ ಹೇಗೆ ಪೀಡಿಸಲಿ ನಾನು
ರೆಕ್ಕೆ ಮುರಿದ ಹಕ್ಕಿಯೊಂದು ಬಾನಿನೆಡೆ ಹಾರಬಲ್ಲದೇ
ನೋವಿನ ಕಹಿ ಉಣಿಸಿದವನ ಹೇಗೆ ಪ್ರೀತಿಸಲಿ ನಾನು
ನೆನಪುಗಳ ಜೊತೆಗೆ ಜೀವನವಿಡೀ ಪ್ರಯಾಣಿಸಿ ಬಿಡು
ಆತ್ಮ ಬಂಧುವಿನ ಕಾಣದೆಯೇ ಹೇಗೆ ಜೀವಿಸಲಿ ನಾನು
ಕನಸುಗಳಿಗೆ ಮೆತ್ತಿದ್ದ ಬಣ್ಣ ಕಣ್ಣೀರಿನಿಂದ ತೊಳೆದೆನು
‘ಕವಿ’ಯಾಗಿಸಿದ ಅವನೊಲವ ಹೇಗೆ ಮರೆಯಲಿ ನಾನು
Wow super
Thank u
ಅಭಿನಂದನೆಗಳು ಸಿಸ್ಟೆರ್
Thank u sis ❤️