ಎಸ್.ಕೆ.ಮಂಜುನಾಥ್-ಅಪ್ಪ -ಅವ್ವ

ಕಾವ್ಯಸಂಗಾತಿ

ಅಪ್ಪ -ಅವ್ವ

ಎಸ್.ಕೆ.ಮಂಜುನಾಥ್

ಅಪ್ಪನ
ಕರಿಬೆನ್ನ ಕತ್ತಲಲಿ
ಸೂರ್ಯ
ತಲೆ ಮರೆಸಿಕೊಂಡ

ಬೆಳಕು ತರಲು ಹೋದ
ಅವ್ವ
ಇನ್ನೂ ಬಂದಿಲ್ಲ
ಅದೆಲ್ಲಿ
ಉರಿಯುತಿರುವಳೊ
ಮಿಣುಕು ಬೆಳಕಾಗಿ

ನಾನು ಬೊಗಸೆಯಲಿ
ಎದೆಯ ಹಣತೆ ಹಚ್ಚಿಕೊಂಡು
ಕಾಯುತ್ತಿದ್ದೇನೆ
ಉಸಿರ ಬಿಗಿ ಹಿಡಿದು
ತೂರುಗಾಳಿಗೆ


Leave a Reply

Back To Top