ಟಿ.ದಾದಾಪೀರ್ ತರೀಕೆರೆ ಕವಿತೆ-ಗೆಳತಿ, ದೀಪಾವಳಿಯ ಆಕಾಶಬುಟ್ಟಿ’

ಕಾವ್ಯ ಸಂಗಾತಿ

ಗೆಳತಿ, ದೀಪಾವಳಿಯ ಆಕಾಶಬುಟ್ಟಿ

ಟಿ.ದಾದಾಪೀರ್ ತರೀಕೆರೆ

ಗಾಳಿಗೆ ಆರುವ ದೀಪಗಳ
ಹಚ್ಚುವ ಹುಚ್ಚು ನನಗಿಲ್ಲ
ನಿನ್ನ ಕಂಗಳ ಕಾಂತಿಯ
ಬೆಳಕನ್ನು ಈ ಜಗತ್ತಿಗೆ
ಹಂಚುವೆ
ಕಪ್ಪಿದೆ, ಕತ್ತಲಿದೆ
ಗೆಳತಿ ಈ ಜಗತ್ತಿಗೆ

ಹಸಿವಿನ ಭಾರತದಲ್ಲಿ
ಪಟಾಕಿಗಳ ಸದ್ದು
ಖಾಲಿ ಹೊಟ್ಟೆ ತುಂಬಿಸದು

ಅಪೌಷ್ಟಿಕತೆ
ರಕ್ತಹೀನತೆ
ದೃಷ್ಟಿ ಮಂದತೆ
ಬೆಳಕೆ‌ ಕಾಣದ ಕಣ್ಣುಗಳು
ನಿನ್ನ ಹುಡುಕುವಂತಿವೆ
ಬೆಳಕು ತುಂಬಿ ಬಿಡು
ಗೆಳತಿ ಇವರ ಕಣ್ಣಲ್ಲಿ
ಆಕಾಶಬುಟ್ಟಿ ಯಾಗಿ

.

ಸಾಮರಸ್ಯವಿಲ್ಲದ
ನಾಡಲ್ಲಿ ನೀನೊಬ್ಬಳೆ‌
ದೀಪ ಹಚ್ಚಿದರೆ
ಏನು ಅಥ೯
ಎಷ್ಟಾದರೂ ಮಲೆನಾಡ
ಸೊಗಡಲ್ಲವೆ ನೀನು
‘ಅಂಟಿಕೆ ಪಿಂಟಿಕೆ’
ಹಬ್ಬದ ಹೆಸರಲ್ಲಿ
ನೀನು ‘ಕಟ್ಟಿನ ದೀಪ’ ವಾಗು
ನಾನು ‘ಕಾಮನ ದೀಪ’ ವಾಗುವೆ
ನಾವಿಬ್ಬರು ದೀಪಗಳ ಹಿಡಿದು
ಬೀದಿಗಳ ಅಲೆಯೋಣ
ಮನೆಗಳ ಮುಟ್ಟಿ
ಎಣ್ಣೆಯ ತುಂಬಿ
ದೀಪಗಳ‌ ಹಚ್ಚೋಣ
ಮನಗಳ‌ ಮುಟ್ಟಿದ
ಪ್ರೇಮದ ದೀಪಾವಳಿ
ನಮ್ಮಿಬ್ಬರದಾಗಿರಲಿ


ಟಿ.ದಾದಾಪೀರ್ ತರೀಕೆರೆ

4 thoughts on “ಟಿ.ದಾದಾಪೀರ್ ತರೀಕೆರೆ ಕವಿತೆ-ಗೆಳತಿ, ದೀಪಾವಳಿಯ ಆಕಾಶಬುಟ್ಟಿ’

  1. ಪಟಾಕಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಎಷ್ಟೋ ಬದುಕುಗಳಿವೆ, ಹೂ ಕುಂಕುಮ ದಾರಗಳನ್ನು ಮಾರಿ ಬದುಕುವ ಜೀವಗಳಿವೆ , ಗಾಳಿಗೆ ಆರುವ ದೀಪದಿಂದಲೇ ಗಾಂಧಿ, ಅಂಬೇಡ್ಕರ್ ರರು ಬೆಳೆದದ್ದು ಕಲಿತದ್ದು, ಅದಕ್ಕೆ ಈಗ ಆರದ ದೀಪಗಳು ಜಗದಗಲ ಹರಡಿರುವುದು. ಕವಿತೆಯ ಆಶಯ ಚೆನ್ನಾಗಿದೆ. ಸಾಮರಸ್ಯ ನಾಡಲ್ಲಿ ಬರಬೇಕಾದರೆ ನಿಮ್ಮಿಂದಲೇ ಬರಬೇಕು. ಇನ್ನೊಬ್ಬರ ಪದ್ದತಿಯನ್ನು ಗೌರವಿಸುವ ಸಾಮರಸ್ಯ ಶುರುವಾಗಲಿ ನಿಮಗೆ.

Leave a Reply

Back To Top