ಕಾವ್ಯಸಂಗಾತಿ
ನಾಗರಾಜ್ ಹರಪನಹಳ್ಳಿ
ಬೆರಳ ತುದಿಯಿಂದ ಎರಡು ಹೆಸರು ಬರೆದು…..
ನಿನ್ನ ಹೆರಳ ಪರಿಮಳ ಕುಡಿದ
ಉನ್ಮತ್ತ ನಾನು
ರಾತ್ರಿ ಉಣಿಸಿದ ತುಟಿಯ
ಎಂಜಲು ಮಧು ಜೇನು
ಇನ್ನೂ ತುಟಿಯ ಮೇಲೆಯೇ ಇದೆ
ನಿನ್ನ ಎದೆಯ ಹರವು
ದಂಡೆಯ ಮೆತ್ತನೆಯ ಮರಳ ಮೇಲೆ
ಹೆಜ್ಜೆ ಇಟ್ಟು ತಣ್ಣನೆಯ ಮೌನದಿ
ನಡೆದಂತಿದೆ
ಬೆಣ್ಣೆಯಂಥ ಮಿದುವಿನ ದಂಡೆಯಲ್ಲಿ
ಬೆರಳ ತುದಿಯಿಂದ ಎರಡು ಹೆಸರು
ಬರೆದು ಒಲವ ಮೀಟಿದಂತಿದೆ
ನಿನ್ನ ಸೆರಗ ಹಿಡಿದು ರಾತ್ರಿಯಲ್ಲಾ
ಮನೆಯ ಮೂಲೆ ಮೂಲೆಯಲ್ಲಿ
ಚುಂಬಿಸಿದ ಕನಸು
ಕಣ್ಣೆದುರು ಚಿತ್ರಗಳಾಗಿ
ಮನದ ಬಿತ್ತಿಯಲ್ಲಿ
ಶೃಂಗಾರದ ನಕ್ಷತ್ರಗಳಾಗಿ
ನರ್ತಿಸುತ್ತಿವೆ
ದೂರದ ನವಿಲು
ನಿನ್ನ ನೋಡಿ ನರ್ತಿಸುವುದ ಮರೆತಿದೆ
ಹೇಳು
ನಿನಗೆ ಏನನ್ನಿಸಿತು?
ನಿನ್ನ ಬೆನ್ನ ಹಿಂದೆ ನಿಂತು ಆಲಿಸುತ್ತಿದ್ದೇನೆ
ಸುಮ್ನನೆ ಇನಿ ಎಂದು
ಕಣ್ಣರಳಿಸಿ
ಮಾತ ತೇಲಿಸಬೇಡ
…………………….
ನಾಗರಾಜ್ ಹರಪನಹಳ್ಳಿ .
ಕಲ್ಪನೆ ಕಾವ್ಯವಾದ ಪರಿ ಚಂದ .