ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಹಬ್ಬಹರುಷ

ನಿಂಗಮ್ಮ ಭಾವಿಕಟ್ಟಿ

 ‘ಹಬ್ಬ‘ ಎಂಬ ಶಬ್ದಕೇ ಮನಸು ಸಡಗರಿಸುತ್ತದೆಅಲ್ಲವೇ? ದಿನ ನಿತ್ಯದಅದೇಜಿಡ್ಡುಗಟ್ಟದಜೀವನದಲ್ಲಿ ಅವಾಗವಾಗ ಬರುವ ಈ ಹಬ್ಬಗಳು ಮನುಷ್ಯನಿಗೆ ಹೊಸ ಚೈತನ್ಯನ್ನುತಂದುಕೊಡುವುದಲ್ಲದೇ ಮುಂದಿನ ಹಬ್ಬದವರೆಗೆ , ಮುಂದಿನ ವರ್ಷದವರೆಗೆ ಸವಿನೆನಪುಗಳನ್ನು ಮನದ ಮೂಲೆಯಲ್ಲಿಕೂಡಿಟ್ಟು ಸದಾ ಜಿನುಗಿಸುತ್ತಿರುತ್ತದೆ .

       ನಮ್ಮ ಹಿರಿಯರು ಈ ಹಬ್ಬಗಳನ್ನು ಸುಮ್ಮನೇ ಮಾಡಲಿಲ್ಲ ಅವುಗಳಿಗೆ ಒಂದು ಹಿನ್ನೆಲೆ , ಒಂದು ಕಾರಣವಿಟ್ಟುಕೊ0ಡೇ ನಡೆಸಿಕೊಂಡು ಬಂದರು . ಪ್ರಕೃತಿ ನಮಗೆ ಏನೆಲ್ಲವನ್ನೂ ಕೊಟ್ಟಿದೆ ಅದಕ್ಕೆ ಪ್ರತಿಯಾಗಿ ನಾವು ಪ್ರಕೃತಿಗೆ ಏನು ಕೊಡಬಲ್ಲೆವು ?ಅಲ್ಲವಾ … ಅದಕ್ಕೆಂದೇ ಮಣ್ಣೆತ್ತು ಮಾಡಿ ಪೂಜಿಸುವುದರ ಮೂಲಕ , ಹೊಲದತುಂಬಾ ಬೆಳೆ ಬಂದು ಹಸಿರಾಗಿ ಕಂಗೊಳಿಸುವಾಗ ಖುಷಿಯಾಗಿ ತರತರದ ಅಡಿಗೆ  ಮಾಡಿಕೊಂಡು  ಸುತ್ತಲ ಮನೆಯವರನ್ನೂ ಕರೆದುಕೊಂಡು ಹೋಗಿ ತೆನೆ ಹೊತ್ತುತೂಗುವ ಬೆಳೆಗೆ ಪೂಜೆ ಮಾಡಿ ಆ ಎಲ್ಲಾ ಅಡಿಗೆಯ ಕೊಂಚ ಪಾಲನ್ನು ಹೊಲದ ತುಂಬಾ ಚೆಲ್ಲಾಡುತ್ತ “ ಹುಲ್ಲುಲುಗೋ ಚಲ್ಲಾಂಬ್ರಗೊ” ಎನ್ನುತ್ತಾರೆ.  ಭೂದೇವಿಯ ಸೀಮಂತ ಮಾಡಿ ನಮಗೆಲ್ಲಾ ಅನ್ನ ನೀಡುವ ಭೂಮಿ ತಾಯಿಗೆ ಧನ್ಯವಾದ ಅರ್ಪಿಸುತ್ತಾರೆ .ಅರ್ಥಪೂರ್ಣ ಆಚರಣೆಅಲ್ಲವೇ?.

   ಹೀಗೆ ಪ್ರತಿ ಹಬ್ಬಕ್ಕೂ ಒಂದೊAದು ಹಿನ್ನೆಲೆಉಂಟು . ಹಬ್ಬಕ್ಕೆದೂರದ ನೆಂಟರು ಮಕ್ಕಳು ಓಡಿ ಬರುತ್ತಾರೆ ಎಲ್ಲರೂ ಕೂಡಿ ಹೊಸ ಬಟ್ಟೆತೊಟ್ಟು, ಸಿಹಿ ಮಾಡಿ ,ತರತರದ ಅಡಿಗೆ ಮಾಡಿ ಪೂಜೆ ಮಾಡಿ ಸುತ್ತಲೂಕುಳಿತು ನಗುತ್ತ ಊಟ ಮಾಡುವುದು ಎಷ್ಟು ಚೆಂದ ! ಆಮೂಲಕ ಕುಟುಂಬದ ಬಂಧ ಗಟ್ಟಿಗೊಳುತ್ತದೆ .ಅಲ್ಲದೇ ವಿಭಿನ್ನ ಭೋಜನದಿಂದ ಬಂಧುಗಳ ಆಗಮನದಿಂದ ಮನಸು ಆನಂದಿಸುತ್ತದೆ .ಆನಂದವೇ ಆರೋಗ್ಯವಾಗುತ್ತದೆ .

   ಆ ದೇವರ ಪೂಜೆಯಾಕೆ ಮಾಡುವುದು ? ಅದೇನುದೇವರೇ ?ಎಂಬೆಲ್ಲಾ ವಿತಂಡವಾದಗಳ ಮಾಡಿಎಲ್ಲಾ ಸಡಗರದಿಂದ ದೂರವಾದರೆ ಏನು ಬಂತು .ಯಾವ ಕೆಲಸದಿಂದ ನಮಗೆ ಖುಷಿ ಸಿಗುವುದೋ , ಯಾವ ಕೆಲಸದಿಂದ ನಮಗೆ ಸಮಾಧಾನವಾಗುವುದೋ ಯಾರಿಗೂ ತೊಂದರೆಯಾಗದಿದ್ದರಾಯಿತು ಅದನ್ನು ಆಚರಿಸಿ ಸಂಭ್ರಮಿಸುವುದರಲ್ಲಿ ಏನು ತಪ್ಪು ? ಮನೆ ಎಲ್ಲಾ ಸ್ವಚ್ಚಗೊಳಿಸಿ ಮನಸನ್ನು ಅಣಿಗೊಳಿಸಿ ಪೂಜೆ, ಪ್ರಸಾದ ಬಾಳೆಲೆ ಮೇಲೆ ಊಟ , ಸಂಗೀತ ,ನಗು, ಹಾಸ್ಯ  ಹರಟೆಇರದಿದ್ದರೆ ಹೇಗೆ ?

   ಪೂಜೆ , ಘಂಟಾ ನಾದ , ಕರ್ಪೂರದ ಘಮ , ಹೂವಿನ ಚೆಲುವು , ಆ ತುಪ್ಪದ ದೀಪ , ಅದು ಬೀರುವ ಧನಾತ್ಮಕ ಪ್ರಭಾವ , ಇವೆಲ್ಲವುಗಳಿಂದ ಮನಸಿಗೆ  ಒಂದು ರೀತಿ ಶಾಂತಿಯ ಅನುಭವವಾಗುತ್ತದೆ. ಅಲ್ಲದೇ ವಿನಯ ವಿಧೇಯತೆ ಮೂಡಿ ಪ್ರಸನ್ನವಾಗುತ್ತದೆ .

ಇದೆಲ್ಲ ಸರಿ ಇವುಗಳಲ್ಲದೇ  ವಿಭಿನ್ನ ಸಂದರ್ಭಗಳಲ್ಲಿ ದೂರದಿಂದ ಬೇರೆ ಬೇರೆ ಊರಿನ ಹಾಸ್ಟೆಲ್‌ಗಳಿಂದ ಮಕ್ಕಳು ಬಂದು ಮನೆ ತುಂಬಾ ಓಡಾಡುತ್ತಾ  ನಗುತ್ತಾ , ಒಬ್ಬಿರಿಗೊಬ್ಬರು ಕಾಲೆಳೆಯುತ್ತಾ  ಮಾಡಿದ ಅಡಿಗೆಯನ್ನು ಚಪ್ಪರಿಸುತ್ತಾ ಅದಕ್ಕೆ ಸಾರ್ಥಕತೆ ಕೊಡುತ್ತಾ ಸುತ್ತ ಕುಳಿತು ತಮ್ಮಕಾಲೇಜ್‌ಕಥೆ ಹೇಳುತಿದ್ದರೆ ಅದು ಒಂದು ದೊಡ್ಡ ಹಬ್ಬವೇ .

    ಬೇಕಾದವರು ಬಂದಾಗಲೂ ಹಬ್ಬದಡುಗೆ ಮಾಡಿದಾಗಲೂ ಅದೂ ಒಂದು ಹಬ್ಬಅಲ್ಲವೇ ?

ಹೀಗೆ ಹಬ್ಬ ಯಾವಾಗಲಾದರೂ ಬರಲಿ ಬಿಡಲಿ ಮನಸು ಮಾತ್ರ ಸಡಗರದಿಂದ ಕೂಡಿರಲಿ.ಅದೇ ಅಲ್ಲವೇ  ಜೀವನ ಸಾರ್ಥಕತೆ .  ನಾವು ಹುಟ್ಟಿರೋದೆ ಖುಷಿಯಾಗಿರಲು, ಖುಷಿ ಕೊಡಲು, ಹಾಗಿದ್ದ ಮೇಲೆ ಅದನ್ನೇ ಮಾಡಬೇಕಲ್ಲವೇ ?

    ಸಲದ ದೀಪಾವಳಿ ಹಬ್ಬದ ಶುಭಾಶಯಗಳು . ಹಬ್ಬ ವಿಜೃಂಬಿಸಲಿ.

   ಪ್ರತಿ ಹಬ್ಬವೂ ಸಂತಸ ಹರುಷ ತಂದು ಜೀವನ ಸುಖವಾಗಿರಲಿ . ಪ್ರತಿಯೊಬ್ಬರಿಗೂ .


                                                             ನಿಂಗಮ್ಮ ಭಾವಿಕಟ್ಟಿ

Leave a Reply

Back To Top