ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಬೆತ್ತಲಾಗುವ ಬಯಲು

ಜಯಂತಿ ಸುನಿಲ್

ಪ್ರತಿರಾತ್ರಿ ಗುನುಗುತ್ತಾಳೆ
ಸಿಗ್ನಲ್ ದೀಪದಡಿ ನಿಂತ ಹುಡುಗಿತನದ ಹೆಣ್ಣೊಬ್ಬಳು ಅದೇ ಹತಾಶೆಯ ಹಾಡನ್ನು…
ಕಳಚಿಕೊಳ್ಳುತ್ತಾಳೆ ದಿನದಿನವೂ ಪಾವಿತ್ರ್ಯದ ಪೊರೆಯನ್ನು…
ಅವಳ ಬದುಕೀಗ ಇರುಳುಗಳಲ್ಲಿ ಉರುಳು..!!

ಜೀವನದ ಮೊದಲ ಹಂತವೇ
ಕೊನೆಯಿರದ ಬೇಸಿಗೆ
ಕಂಬನಿ ಬಟ್ಟಲನ್ನಿಡಿದು ತುತ್ತು ಚೀಲವನ್ನೊರುವ ಶಿಲೆ..
ಸಾಗಿದ ಹಾದಿಗುಂಟ ಬರೀ ಕಲ್ಲುಮುಳ್ಳುಗಳೇ ಸರಮಾಲೆ..!!

ಕೊನೆ ಮೊದಲಿಲ್ಲದ ರಾತ್ರಿಗಳಲ್ಲಿ
ಬೆತ್ತಲಾಗುವ ಕಾಯ..
ಗೀರಿ ಹಚ್ಚಿದ ಬೆಂಕಿಯ ಕಿಡಿಯಂತ ಬಿಡಿಗಾಸು ತೋರಿಸಿ ಕುಕ್ಕಿ ತಿನ್ನುವ ನರಹದ್ದುಗಳಿಂದ ನಿರಂತರ ಗಾಯ..!!

ಹೂಗಳ ಕಡೆ ನೋಡಿ
ನಗುತ್ತಾಳೆ,ನುಡಿಯುತ್ತಾಳೆ
ಪೂಜೆಗೆ ನಿಮ್ಮಂತೆ ನಾನು ಸಲ್ಲಬೇಕಾದವಳು
ನೀವು ಹಗಲಲ್ಲಿ ಬಾಡಿದರೆ
ನಾ ಇರುಳಲ್ಲಿ ನಲುಗುವೆ
ಬೇರೇನಿದೆ ಬಾಳಲ್ಲಿ? ಬಾಳೆಲ್ಲಾ ಬರೀ ಇರುಳು..!!

ಅದೇ ಬೆಳಗು ಬೈಗು,ಅದೇ ನೋವು,ಅದೇ ಬಿರುಗಾಳಿ
ಖಾಲಿ ಕೊಡವಾಗಿ ತುಂಬಿಸಿಕೊಂಡು ಮತ್ತೆ ಖಾಲಿ ಖಾಲಿಯಾಗುವ ಭಾವ
ಕಾಯುತ್ತಾಳೆ ಹತ್ತಿರ ಬರುವ ರಾತ್ರಿಗಳಿಗೆ
ಏನು ಮಾಡುವುದು ಈ ಹಾಳು ರಾತ್ರಿಗಳು ಬಲುಸುಧೀರ್ಘ..!!

ತುತ್ತಿನ ಚೀಲ ತುಂಬಿಸಿಕೊಳ್ಳಲು ತನ್ನನ್ನೇ ಅರ್ಪಿಸಿಕೊಂಡವಳಿಗೆ
ಲೋಕ ನೀಡುವ ಬಿರುದು ಸಾಮಾನ್ಯದ್ದಲ್ಲಾ ನೋಡಿ..
ಮತ್ತದೇ ಕಾಯಕದಲ್ಲಿ ಕಾಯವನ್ನು..
ಲೋಕಕ್ಕಂಜದೇ ನೆಲದ ಮೇಲೆ ಊರುತ್ತಾಳೆ
ಸತ್ತಹೆಣಕ್ಕೆ ರಣಹದ್ದುಗಳ ಮುತ್ತಿಗೆ..
ಬಯಲು ಪುನಃ ಬೆತ್ತಲಾಗುತ್ತದೆ..!!


ಜಯಂತಿ ಸುನಿಲ್

About The Author

10 thoughts on “”

  1. ಪ್ರಭುರಾಜ ಅರಣಕಲ್.

    ಜಯಂತಿ ಮೇಡಂ, ನಿಮ್ಮ ‘ಬೆತ್ತಲಾಗುವ ಬಯಲು’
    ಕವಿತೆ ಓದಿ, ತಳಮಳಗೊಂಡೆ. ಧನ್ಯವಾದಗಳು, ಮೇಡಂ.
    — ಪ್ರಭುರಾಜ ಅರಣಕಲ್

  2. ಚಂದ್ರಶೇಖರ ಹಡಪದ ಜಿಲ್ಲಾಧ್ಯಕ್ಷ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರ ಗ್ರಾಮಾಂತರ

    ಅದ್ಭುತ ಕವನ ಅಭಿನಂದನ

  3. ಮನದಳಲು ತುಂಬಾ ಚೆನ್ನಾಗಿ ವ್ಯಕ್ತವಾಗಿದೆ…ಮನ ತಟ್ಟುವ ಸಾಲುಗಳು..

    ಹಮೀದಾ ಬೇಗಂ ಸಂಕೇಶ್ವರ.

Leave a Reply

You cannot copy content of this page

Scroll to Top