ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಗಜಲ್
ಅನಸೂಯ ಜಹಗೀರದಾರ
ನನ್ನ ನೆನಪು ನಿನ್ನ ಜೀವ ಹಿಂಡಿ ಕೊಲ್ಲುವುದಾದರೆ ಅದೇಕೆ ಬೇಡಬಿಡು
ಬಾರದ ನಗುವ ಅಧರದಿ ಎಳೆದು ತರುವುದಾದರೆ ಅದೇಕೆ ಬೇಡಬಿಡು
ಪ್ರತಿಯೊಂದು ಮಾತಿಗೆ ಅರ್ಧ ಗಿರ್ಧ ಪ್ರತಿಮಾತು ಮೌನಕ್ಕಿಂತ ಹರಿತವದು
ನುಡಿಯ ಸೆಲೆ ತುಟಿ ಅಂಚಲಿ ಒಣಗುವುದಾದರೆ ಅದೇಕೆ ಬೇಡಬಿಡು
ನಮ್ಮಕಂಗಳ ನೋಟವೇ ಪರಮ ಸತ್ಯ ಮಿಥ್ಯವಲ್ಲಿ ಸುಳಿಯದು
ನೇತ್ರ ಸನ್ನೆ ಇಲ್ಲದಿಟ್ಟಿ ಅತ್ತಿತ್ತ ಹೊರಳಿಸುವುದಾದರೆ ಅದೇಕೆ ಬೇಡಬಿಡು
ನೆಪದ ನಿನ್ನ ನಟನೆ ನೈಜತೆಯ ಮೀರಿಸಿದೆ ನನಗೆ ಗೊತ್ತಾಗದೆ ಇರುವುದೆ
ಗಿಲೀಟು ಚಿನ್ನ ತನ್ನ ಹೊಳಪ ಮಂಕಾಗಿಸುವುದಾದರೆ ಅದೇಕೆ ಬೇಡಬಿಡು
ಜೀವನ ಪರ್ಯಂತ ಯಾರು ಸಾಥಿ ಆದಾರು ಹುಚ್ಚು ಖೋಡಿ ಮನಸು ಅನು
ಬಾಡಿಗೆ ನೆಲೆ ಇಲ್ಲಿ ವಾರಸುದಾರ ದೂಡುವುದಾದರೆ ಅದೇಕೆ ಬೇಡಬಿಡು
ಅನಸೂಯ ಜಹಗೀರದಾರ
ಬಾಡಿಗೆ ನೆಲೆ ಇಲ್ಲಿ ವಾರಸುದಾರ ದೂಡುವುದಾದರೆ ಬೇಡ ಬಿಡು
ಅದ್ಭುತ ಸಾಲುಗಳು
ಧನ್ಯವಾದಗಳು ಮೇಡಮ್..!