ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಹುಡುಗ ಮತ್ತು‌ ಕನಕ

ಯಾಕೊಳ್ಳಿ.ಯ.ಮಾ

ಹುಡುಗ
ಭರಪೂರ ಯೌವನ ,
ಮೇಲು ಜಾತಿ ಬೇರೆ!
ನಾಲಗೆಯ ಸಂಸ್ಕಾರ
ಮಾತಿನ ವಿನಯ ಎರಡೂ
ಅಹಂನಲಿ ಕಳೆದಿತ್ತು
ಕುಳಿತಿದ್ದ ಕಲ್ಲಬಂಡೆಯ ಮೇಲೆ.

ಅತ್ತಲಿಂದ ಬಂದ
ಮುಪ್ಪಾನು ಮುದುಕ ,
ಮುಖದ ತುಂಬ ಬಿಳಿಯ ಗಡ್ಡ
ಜಿಡ್ಡುಗಟ್ಟಿದ ಜಡೆ
ಎದೆಯ‌ ಮೆಲೊಂದು ವಸ್ತ್ರ
ಮೊಣಕಾಲ ಮೇಲೆ ಉಟ್ಟ ದೋತ್ರ
ಹೊರಟಿದ್ದ ತನ್ನ ದಾರಿ ಹಿಡಿದು

ಹುಡಗನ ಯೌವನ ಪಿಸಿ ನಕ್ಕಿತು
ಮುದುಕನ ಕೆಣಕಬೇಕೆನಿಸಿತು
ಕೇಳಿದ ” ಏ ಎಲ್ಲೋ ಕನಕ?
ಎಲ್ಲಿ ಹೊರಟೆ?
ಮುದುಕನಿಗೆ ಕೋಪ!
ನನ್ನ ಮೊಮ್ಮಗನ ವಯ,
ಬಾಯಿ ಬಿಟ್ಟರೆ ಇಲ್ಲ ನಯ,
ಹುಡುಗನ‌ ಮದ ಮುರಿಯಲು
ಸರಿಯಾದ ಸಮಯ!

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಹುಡುಗ ಮತ್ತು‌ ಕನಕ

ಯಾಕೊಳ್ಳಿ.ಯ.ಮಾ

ಕೊಂಕು ಮಾತಲಿ‌ ಉತ್ತರಿಸಿದ
” ಯಾವಂದೋ ಹೆಂಡತಿನ
ಯಾವನೋ ತುಗೊಂಡು ಹೋಗ್ಯಾನ
ಅವನ್ನ ಹುಡುಕಾಕಿನ್ಯಾವನೋ ಹೋಗ್ಯಾನ
ನಾ ಅವರಪ್ಪನ ಹುಡುಕಿ ಹೊರಟಿನಿ…”

ಮುದುಕ ಒಗೆದ ಕವಡಕಂಟಕ ಜಾಲದಲಿ
ಹುಡುಗ ಸಿಲುಕಿದ ..
ಓದಿದ ಓದು ಸಹಾಯಕ್ಕೆ ಬರಲಿಲ್ಲ.
ಮುದುಕಿನ ಕೆಣಕಿದ್ದು ತಪ್ಪಯಿತಾ!ಎಂದ
ಓಡಿದ ಅಪ್ಪ ಪಂಡಿತನ ಅರಸಿ ಒಗಟ ಬಿಡಿಸಲು
ಇತ್ತ ಗಾಳಿ ಮಹಾಗಾಳಿಯನರಸಿ
ತನ್ನಷ್ಟಕ್ಕೆ ಹುಡುಗನ ಕೆಡವಿ
ಮುಂದೆ ಹೊರಟಿತು

ಮನೆಗೆ ಬಂದ ಮಗನ ಪ್ರಶ್ನೆಯನು
ಅನುಭವಿ ಅಪ್ಪ ಬಿಡಿಸಿದ .
ರಾಮನ ಹೆಂಡತಿ ಸೀತೆ
ಅವಳ ಸೆಳೆದೊಯ್ದವನು ರಾವಣ
ಅವನ ಹುಡುಕಿ ಹೊರಟದ್ದು ಹನುಮ
ಅವನ ತಂದೆ ವಾಯು…ಮುದುಕ
ಹೊರಟದ್ದು ಗಾಳಿಯ ನರಸಿ
ಸಂಜೆ ವಾಯುವಿಹಾರಕ್ಕೆ !
ತಿಳಿಯಿತಾ ಹುಚ್ಚು ಮಗನೆ
ಈ ಸಿಕ್ಕಿಮೊಳು ನೀನೆಲ್ಲಿ ಸಿಕ್ಕೆ?

ಅಪ್ಪ ಹೇಳಿದ ಮಗನಿಗೆ
ಕಲಿತ ವಿದ್ಯೆಗೆ ವಿನಯ ಬೇಕು ಮಗನೆ..
ನೀ ವ್ಯಂಗ್ಯದಲಿ ಮಾತಾಡಿಸಿದ್ದು
ವಿದ್ಯೆ ಯ ಮಹಾಪರ್ವತವ, ಕನಕ ಗುರುವ
ಹೋಗಿ ಕೇಳು ನಯದಿ ಕ್ಷಮೆಯ..

ಮರುದಿನ ಕನಕನನರಸಿ ಬಂದ ಹುಡುಗ
ಮುದುಕನ ನಮಿಸಿದ
ಅಜ್ಜ ತುಸುನಗುವಿನಲಿ ಕ್ಷಮಿಸಿದ..
ಅದೇ ಬಿಳಿಯ ಗದ್ದ ನೀವುತ್ತ
ಹುಡುಗನ ಹರಸಿದ
ಆದಿಕೇಶವನ ಸ್ಮರಿಸಿದ..
ಮತ್ತೆ ಗಾಳಿ ಗಂಧ ಸಂವಾದ ನಡೆಸಿದವು
ಹುಡುಗ ತಿಳಿಯುತ್ತ ಹೋದ
ಅಜ್ಜ ಕಳೆಯುತ್ತ ಹೋದ
ಆಗ ಗೋಧೂಳಿ ಹೊತ್ತು..
ಬೆಳಕು ತುಸು ತುಸುವೆ ಹರಡಿತ್ತು!

——————


ಯಾಕೊಳ್ಳಿ.ಯ.ಮಾ

Leave a Reply

Back To Top