ಬಾಗೇಪಲ್ಲಿಯವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿಯವರ ಗಜಲ್

ಮೇಜಿನ ಮುಂದೆ ಕುಳಿತಾಗ ಹಾಲ್ಬಿಳುಪಿನ ಕಾಗದದಿ ಎನೂ ಬರೆದಿರಲಿಲ್ಲ
ಪ್ರಸ್ತುತ ಗಜಲ್ ಬರೆಯೆ ಈ ರೀತಿ ಮೂಡಿ ಬರುವುದೆಂದು ಊಹಿಸಿರಲಿಲ್ಲ

ಮಸ್ತಿಷ್ಕದಿ ನೂರಾರು ಪದ ಗಚ್ಛಗಳು ತೇಲಾಡಿದವು ಎಂದಿನಂತೆ ಸಹಜವಾಗಿ
ತೂರಿ ಜಾಲಾಡಿ ಶೋಧಿಸಿ ಹೆಕ್ಕಿದರೂ ಸಹ ಇಷ್ಟೇ ಉಳಿವುದ ತೋಚಿರಲಿಲ್ಲ

ನನ್ನೀ ಗಜಲ ಓದಿ ಹಾಡಿ ಯುಧ್ಧಗಳೇ ನಿಲ್ಲಬಹುದೆಂದು ಯೋಚಿಸಿದ್ದೆ
ಒಡಕು ಮನಗಳ ಜಟಾಪಟಿ ಇಂದಾದ ದೇಹ ವ್ರಣಗಳನೇ ಮಾಗಿಸಲಿಲ್ಲ

ಕನಸಿದ್ದೆ ನಾ! ಜಗದ ಪ್ರೇಮಿಗಳೆಲ್ಲಾಸದಾ ಇದನು ಹಾಡಿ ಉಲ್ಲೇಖಿಸುವರೆಂದು
ಎಳೆ ಕಂದಮ್ಮಗಳ ಅಳು ಸಮಾಧಾನಿಸಿ ಸಂತೈಸುವ ಜೋಗುಳವೂ ಆಗಬರಲಿಲ್ಲ

ಸಮಸ್ತ ಮನುಜಕುಲಕೇ ಭರವಸೆ ಮೂಡಿಸುವುದೆಂಬ ಭಾವನೆಯೊಂದಿತ್ತು
ಕೃಷ್ಣಾ! ಪ್ರಮಾಣಿಕ ಯತ್ನದಿಯೂ ಸೂಕ್ತಪದ ಕೈತಪ್ಪುವುದು ಗೊತ್ತಾಗಲಿಲ್ಲ

(ಟ್ವಿಟ್ಟರ್ನಲ್ಲಿ ಬರೆಯುವ ಪ್ರಸಿದ್ದ ಕವಿ ಬ್ರೈನ್ ಬಿಲ್ಸ್ಟನ್ ಅವರ ಕವಿತೆಯ ಪ್ರೇರಿತವಾದ್ದು)


Leave a Reply

Back To Top