ನೀನಲ್ಲವೆ?- ಅನಿತಾರವರ ಕವಿತೆ

ಕಾವ್ಯ ಸಂಗಾತಿ

ನೀನಲ್ಲವೆ?

ಅನಿತಾ

ಹೃದಯದೊಳು ಮಿಡಿಯುತಿದೆ
ಮತ್ತೊಂದು ಹೃದಯ
ನವ ಮಾಸಗಳು ಸಂತಸದ
ಭಾರ ಹೊರಲು ತಯಾರಿದೆ ಗರ್ಭಾಶಯ!

ಕಣ್ಣೊಳಗೆ ಕಣ್ಣೊಂದು
ಕಣ್ತೆರೆಯುವ ಸಮಯ
ಕಿವಿಯೊಳಗೆ, ಕಿವಿಯಾಗಿ
ಆಲಿಸುತಿದೆ ನಿನ್ನಾ ಕರೆಯಾ!

ಊಹೆಗೂ ನಿಲುಕದ
ಕಂಪನ
ಉದಾಹರಣೆಯಾಗುತಿದೆ ಹೊಸತನ,
ಹೊಸರೀತಿಯ ಕಲ್ಪನ!

ಬಂಧಗಳ ಹೊಸೆಯುತಿದೆ
ಪ್ರತಿಕ್ಷಣ
ಸಂಬಂಧಗಳು ಬೆಸೆಯಲು
ನೀನಾಗುವೆ ಕಾರಣ!

ಎದುರು ನೋಡುತ್ತಿದೆ
ಮುಂದಿನ ಸಡಗರದ ಕಾಲ
ಎಣಿಸುತಿದೆ ಮನ
ಹೊಸ ಬೆಳಕೊಂದು ಧರೆಗಿಳಿವ ಸಕಾಲ!

 ---------------------------

About The Author


Comments

Leave a Reply

You cannot copy content of this page