ಕಾವ್ಯ ಸಂಗಾತಿ
ಈತನ ಬದುಕು
ಜಿ.ಎಸ್.ಶರಣು
ಹರಿದ ಚಪ್ಪಲು ಸುಡುವ ಬಿಸಿಲು
ಮೈಲಿ ದೂರ ಮಹಡಿ ಗುಡ್ಡ
ಹೋಗಬೇಕು ಬುತ್ತಿಯಿಲ್ಲದ ಬರಿಗೈಯಲ್ಲಿ
ಸಾಯಬೇಕು ಸಾಯಂಕಾಲದವರೆಗೆ
ಹೊಟ್ಟೆಗೆ ತಣ್ಣೀರು ಹಾಕಿ
ಕೈಯಲ್ಲಿ ಬಾರುಕೋಲು ಹೆಗಲ ಮೇಲೆ ಟವಲ್
ಹಸಿದಿದೆ ಹೊಟ್ಟೆ ಹರಿದಿದೆ ಬಟ್ಟೆ
ಕಾಯಬೇಕು ದನ ಸಾಗಿಸಬೇಕು ಜೀವನ
ಈತನ ಬದುಕು ಅಷ್ಟಕ್ ಅಷ್ಟೆ
ವಯಸ್ಸು ಮಿತಿಮೀರಿ ಮುಪ್ಪಾಗಿದ್ದಾನೆ
ಸಾಲದ ಸುಳಿಯಲ್ಲಿ ಸಾಯುತ್ತಿದ್ದಾನೆ
ಸಂಸಾರ ಕೊರಳಿಗೆ ಹಾಕೊಂಡು ಅಳುತ್ತಿದ್ದಾನೆ
ಈತನ ಬದುಕು ಅಷ್ಟಕ್ ಅಷ್ಟೆ
ಆರೋಗ್ಯದ ಸ್ಥಿತಿ ಕೆಟ್ಟೋಗಿದೆ
ದಣಿದುಕೊಳ್ಳದೆ ಮಾಡುತ್ತಿದ್ದಾನೆ ಕಾಯಕ
ಅವನ ಬದುಕು ನಿಮ್ಮಂತಯಿಲ್ಲ
ಕಂಡವರ ದುಡ್ಡಲ್ಲಿ ಬದುಕುವನಲ್ಲ
ಈತನ ಬದುಕು ಅಷ್ಟಕ್ ಅಷ್ಟೆ
Supre dosta