ಶ್ರೀಕಾಂತಯ್ಯ ಮಠ-ಸಮಾಜ

ಕಾವ್ಯ ಸಂಗಾತಿ

ಸಮಾಜ

ಶ್ರೀಕಾಂತಯ್ಯ ಮಠ

ಬರೆದ ಅಕ್ಷರದಲ್ಲಿ ಅರ್ಥವಿತ್ತೆ ಹೊರತು ಅರ್ಥೈಸಿಕೊಳ್ಳುವರಿಲ್ಲ
ಎದುರಿಗೆ ಕಾಣುವ ಸಮಾಜದಲ್ಲಿ ಎಲ್ಲರೂ ಇರುವಾಗ ನನ್ನವರು ಯಾರು ತಿಳಿಯಲಿಲ್ಲ.

ನಾನು ಒಬ್ಬನೆಯಿರುವಾಗ ವಿಚಾರದ ಗಂಟು ಕಗ್ಗಂಟು ಹಾಕುತ್ತಿದ್ದೆ
ಎಲ್ಲರ ಜೊತೆಯಿರುವಾಗ ಅವರ ನಂಟನ್ನು ಹಚ್ಚಿಕೊಂಡು ಸೇವಕಂತಿರುತ್ತಿದ್ದೆ.

ಕೆಲಸ ಕಾರ್ಯ ತರುವಾಯ ಎಲ್ಲರಿಗೂ ಬೇಕಿದ್ದೆ
ಮನಸ್ಸಿಗೆ ಹಿಡಿಸುವಂತೆ ನಟನೆಯಿಲ್ಲದ ಜೀವಂತ ಗೊಂಬೆಯಾಗಿದ್ದೆ.

ನಿಸ್ವಾರ್ಥದ ಜೀವನ ನಡೆಸಿಕೊಂಡು ಸಮಾಜದಲ್ಲಿ ಹೆಸರಾಗಿದ್ದೆ
ಈಗೀಗ ಅವರವರ ಸ್ವಾರ್ಥದಲ್ಲಿ ನಾನಿಂದು ದೂರವಾಗಿ ಏಕಾಂತದ ಮೌನದಲ್ಲಿ ಮನೆ ಸೇರಿದ್ದೆ.

ಯಾರನ್ನ ನಂಬಬೇಕು ಯಾರನ್ನ ಬಿಡಬೇಕು
ಹೇಗೆ ಇವರೆಂದು ತಿಳಿಯಬೇಕು
ಒಂದು ಸೂತ್ರವಿಲ್ಲದ ಸಮಾಜ
ಬರಿ ಪಾತ್ರಗಳೆ ಕಾಣುತ್ತಿವೆ ಕೊನೆಯಲ್ಲಿ ಶೂನ್ಯವಾಗಿ ಮುಗಿಯುತ್ತದೆ.

ಏನು ಮಾಡಲಿ ಎಲ್ಲಿರಲಿ ನನಗೆ ನಾನೆ ಉತ್ತಮ
ಎಲ್ಲರೂ ಇರುವಾಗ ಪುರುಷೋತ್ತಮರು ಯಾರು
ಮನಸ್ಸುಗಳು ಬೇರೆಯಾದರೂ ಕಾರ್ಯಗಳು ಬೇರೆ

ಸದ್ದಿಲ್ಲದೆ ಮನೆಯಲ್ಲಿ ಸಿರಿವಂತರಾಗಿ ಬಿಡುತ್ತಾರೆ
ಗುದ್ದಾಡಿ ದುಡಿದರೂ ಜಗದಲ್ಲಿ ಬಡವರಾಗಿ ಬಿಡುತ್ತೇವೆ
ಶ್ರೀಮಂತಿಕೆಯ ಜಗದಲ್ಲಿ ಜಾಗವಿಲ್ಲದವರು ನಾವು
ಜಾಗೃತವೊಂದೆ ಬೆಳಕಿಲ್ಲಿ
ಕಂಬದ ಬೆಳಕು ಬದುಕಿಸುವುದೆ ತಿಳಿಯದೆ ಹೋದವರು ನಾವಿಲ್ಲಿ.


Leave a Reply

Back To Top