ಜಯಶ್ರೀ.ಭ.ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ.ಭ.ಭಂಡಾರಿ

ಅಂದೇಕೋ ಹೃದಯ ಡಂಗುರ ಹೆಚ್ಚಿ ಮನ ಕದನ ಕಣ ಆಗಿದೆ ಕೇಳು.
ಇಂದೇಕೋ ಅಡಿಗಡಿಗೆ ನೆನಪುಗಳ ಮೆರವಣಿಗೆ ತಾಗಿದೆ ಕೇಳು.

ಮೌನವಾಗಿ ಮೊರೆಯುತ ತುಟಿ ಕಚ್ಚಿ ನೋವು ಮರೆಯಲೇನು 
ಮ್ಲಾನವಾಗಿ ಸರಿಯುತ ಒಲವ ರಚ್ಚೆ ಕಾವು ಕದಡಿ ಏಗಿದೆ ಕೇಳು.

ಇದಿರು ಬಂದಾಗಲೊಮ್ಮೆ ಕಣ್ಣಂಚಿನ ಸಂದೇಶ ಮಿಂದು ಸಾಗುವೆ.
ಅದುರುವ ಅಧರಗಳಿಗೆ ಮಿಂಚಿನಂತೆ ಆದೇಶ ನಿಂದು ನೀಗಿದೆ ಕೇಳು.

ಬರುವ ನೀರೀಕ್ಷೆಗೆ ಹಸಿರು ತೋರಣ ಚಂದದಿ ತೂಗುತಿದೆ ನೋಡು
ಮೀರುವ ಪರೀಕ್ಷೆಗೆ ಉಸಿರು ಧಾರಣ ಬಂಧದಿ ಮಾಗಿದೆ ಕೇಳು

ನಿನ್ನಂತರಂಗದ ಬಯಕೆ ಹೇಳದೆ ಜಯಳು ಅರಿತಿಹಳು ಮಿಡಿದು
ಬಹಿರಂಗದಿ ತುಡಿತ ತಾಳದೆ  ನಿಜದಿ ನಿದಿರೆಯ ಅರಸುತ ಸಾಗಿದೆ  ಕೇಳು


ಜಯಶ್ರೀ.ಭ.ಭಂಡಾರಿ.

Leave a Reply

Back To Top