ಅನುವಾದ ಸಂಗಾತಿ
ಬದುಕಿನಲ್ಲೊಂದು ದಿನ
ಇಂಗ್ಲೀಷ್ ಮೂಲ:ಗಿಮ್ಮೀ ಓಷೋರ್ನೆ
ಕನ್ನಡ: ಬಾಗೇಪಲ್ಲಿ ಕೃಷ್ಣಮೂರ್ತಿ
ಹೆಚ್ಚಿನೊಂದು ನಾಣ್ಯದ ಗಳಿಕೆ
ದೂಡಿದ್ದು ಒಂದು ದಿನ
ಗಳಿಸಿದ ಹಣ ವೆಚ್ಚವಾಯ್ತು
ಸಧ್ಯ ಇಲ್ಲಿರಲು ಬಾಡಿಗೆ ನೀಡಿದೆ
ಕೆಲಸ ಬಲು ಕಠಿಣ
ಕೂಲಿ ಬಲು ಕಡಿಮೆ
ಆದರದಷ್ಟೇ ವಿಧಿ
ಹೀಗೆ ಮುಂದುವರೆಯುವುದು
ತ್ಯಾಗ ಮಾಡುವೆವು ನಾವ್
ಜೀವನದ ಅರ್ಧಭಾಗ
ಬದುಕು ಸರಿದೂಗಿಸಿ ಹೊಂದಿಸೆ
ಹೀಗಾಗಿ,
ನಿಧಾನಿಸು
ನಿನ್ನ ಈಗಿನ ಸವಾರಿಯ ಪೂರ್ಣ ಆನಂದಿಸು
ಏಕೆಂದರೆ
ನಿನ್ನ ಸಾವಿನದಿನ ನಿನಗರಿಯದು.