ಮಾಜಾನ್ ಮಸ್ಕಿ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ ಗಜಲ್

ಮರಳಿನಂತೆ ನೆನಪಿನ ರಾಶಿ ಜಾರುತ್ತ ಮೌನವಾಗಿದೆ ಹೃದಯ
ನೀರಿನ ಝರಿಯಾಗಿ ಭಾವ ಹರಿಯುತ್ತ ಮೌನವಾಗಿದೆ ಹೃದಯ

ನಿನ್ನ ಕುಹಕ ನಗೆ ಪ್ರತಿ ಕ್ಷಣ ನೆನೆನೆನೆದು ರೋದಿಸಿದೆ
ಹಣೆಬರಹದಲ್ಲಿರದ ಪ್ರೀತಿ ಅಣಕಿಸುತ್ತ ಮೌನವಾಗಿದೆ ಹೃದಯ

ಅರಿತು ಬೆರೆತ ಸಾಂಗತ್ಯವೂ ನಿನ್ನದಾಗಲಿಲ್ಲ ಯಾಕೆ ಬೆವಫಾ
ಇನ್ನಿಲ್ಲದ ಮಂಗನಾಟಕ್ಕೆ ಜೀವ ಕುಸಿಯುತ್ತ ಮೌನವಾಗಿದೆ ಹೃದಯ

ಸುಂದರ ಗೊಂಬೆಯಾಗಿ ಸಂತೆಯೊಳಗೆನೋ ಅಲಂಕರಿಸಿದೆ ನನ್ನ
ಕಂಗಳು ಬೆಂಕಿಯ ಕೆಂಡವಾಗಿ ಕಾರುತ್ತ ಮೌನವಾಗಿದೆ ಹೃದಯ

ಮರೆಯಲೆಂತು ಯಾರನ್ನು ನಂಬದಂತೆ ಮಾಡಿರುವ ನಿನ್ನನ್ನು
“ಮಾಜಾ” ಮಾತಿನ ಮೋಸ ಜೀವ ಹಿಂಡುತ್ತ ಮೌನವಾಗಿದೆ ಹೃದಯ


Leave a Reply

Back To Top