ಇಂಥವರು ಇರುತ್ತಾರಾ?

ಕಾವ್ಯ ಸಂಗಾತಿ

ಇಂಥವರು ಇರುತ್ತಾರಾ?

ಅಮುಭಾವಜೀವಿ ಮುಸ್ಟೂರು

ಇಂಥವರೂ ಇರುತ್ತಾರ
ತನ್ನ ತಪ್ಪಿದ್ದರೂ ಕೂಡ
ಅಮಾಯಕರ ಮೇಲೆ
ಅದನ್ನು ಹೊರಿಸಿ ತಾವು
ಬಲು ಸಾಚಾಗಳಂತೆ ತೋರುವರು

ಮದುವೆಯಾಗಿ ಗಂಡನಿರಲು
ಎದೆ ಮಟ್ಟಕ್ಕೆ ಮಕ್ಕಳು ಬೆಳೆದಿರಲು
ಅನ್ಯ ಪುರುಷನ ತೋಳಿನಾಸರೆ ಬಯಸಿ
ಮತ್ತೆ ಅವನ ಮೇಲೆ ಆರೋಪ ಹೊರಿಸಿ
ತಾ ನಿರಪರಾಧಿಯಂತೆ ನಟಿಸುವರು

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದೆ
ಬಾಯಿ ಇದೆಯೆಂದು ತುಚ್ಚವಾಗಿ ಮಾತನಾಡಿ
ಹೊಲಸಿನೊಳಗೆ ಮಿಂದೆದ್ದವರು
ಸ್ವಚ್ಛ ಮನದವನ ಮೇಲೆ ಇಚ್ಛೆ ಬಂದಂತೆ
ಹೇಸಿಗೆಯನೆಸೆವ ಕಡು ನೀಚರು

ತನ್ನ ಸ್ಥಾನದ ಮಹತ್ವವನರಿಯದೆ
ಅಸಭ್ಯವಾಗಿ ವರ್ತಿಸಿದ್ದರು
ಬಲು ಸಭ್ಯನಂತೆ ತೋರಿಸಿಕೊಂಡು
ತಮ್ಮ ಸ್ಥಾನಮಾನದಿ ಅದನ್ನೆಲ್ಲ
ಮುಚ್ಚಿಹಾಕುವ ಭಂಡರು

ನಾಶವಾಗಲಿ ಇಂಥವರ ಸಂತತಿ
ಜಗಕೆ ಮಾದರಿಯಾಗಲಿ ಸಭ್ಯ ಸಂಸ್ಕೃತಿ
ಹಾದಿ ತಪ್ಪಿದವರಿಗೆ ಶಿಕ್ಷೆಯಾಗಲಿ
ಅಮಾಯಕರಿಗೆ ರಕ್ಷಣೆ ಸಿಗಲಿ
ಸತ್ಯವೇ ಎಂದೆಂದಿಗೂ ಜಯ ಕಾಣಲಿ


Leave a Reply

Back To Top