ಕಾವ್ಯ ಸಂಗಾತಿ
ಗಜಲ್
ರತ್ನರಾಯಮಲ್ಲ
ಸಾಯಲಾಗದ ವಿಷಯಗಳಿವೆ ಬರೆಯುತ್ತೇನೆ ನಾನು
ಬರಿದಾಗದ ಜೀವನ ಶ್ರದ್ಧೆಯಿದೆ ಓದುತ್ತೇನೆ ನಾನು
ಅಕ್ಷರ ಜಾತ್ರೆಯಲಿ ನೋವುಗಳು ವಾಸಿಯಾಗುತ್ತಿವೆ
ಗಜಲ್ ನಲ್ಲಿ ಜನ್ನತ್ ಇದೆ ಆಲಂಗಿಸುತ್ತೇನೆ ನಾನು
ಹೊತ್ತಿಗೆ ತಿಳಿಯದು ಬೆನ್ನಿಗೆ ಚೂರಿ ಇರಿಯುವ ಕಲೆ
ಅಶಅರ್ ನಲ್ಲಿ ಲೋಕವನ್ನೆ ಮರೆಯುತ್ತೇನೆ ನಾನು
ನೆಮ್ಮದಿಯ ಬರಗಾಲ ಮನುಕುಲವನು ಆವರಿಸಿದೆ
ಮುಶಾಯಿರಾಗಳಲ್ಲಿ ಶಾಂತಿ ಹುಡುಕುತ್ತೇನೆ ನಾನು
ಮಲ್ಲಿ ಮಲ್ಲಿಗೆಯಾಗಿ ಅರಳಬೇಕಿದೆ ಗುಲ್ಜಾರ್ ನಲ್ಲಿ
ಹೃದಯವಂತ ಗಾಲಿಬ್ ನನ್ನು ಪೂಜಿಸುತ್ತೇನೆ ನಾನು
ವಾಹ್ವಾ.. ವಾಹ್ವಾ… ಮನ ಮುಟ್ಟುವ ಶೇರ್ ಗಳು, ಅರ್ಥಪೂರ್ಣ ಗಜಲ್