ಯ್ಯಾಂಗ್ಹ ನಂಬೋದು?

ಕಾವ್ಯ ಸಂಗಾತಿ

ಯ್ಯಾಂಗ್ಹ ನಂಬೋದು?

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಚುಕ್ಕಿಗಳ ಲೆಕ್ಕ ತೋರುಸ್ತೀವಿ,
ಆಳ ಅಗಲ ಅಳೆದು ತೂಗುತೀವಿ
ಮಳೆ ಬೆಳೆಗೆ ಸಾಕ್ಷಿಯಾಗ್ತೀವಿ
ನೋವಿಗೂ ಮಾರುಕಟ್ಟೆಯಾಗ್ತೀವಿ…..
ಅಂತಾ……
ಕೈಮುಗ್ದು,ಕಾಲಿಗ್ಬಿದ್ದು,
ಅತ್ತಂಗ ಸತ್ತಾಂಗ ಮಾಡಿದಿರಲ್ಲಾ…
ಋಣಭಾರ ಮಣಭಾರ-
ತಿಂದು- ತೇಗಿದೇಟು? ನಿಮ್ಹಣೆ- ಬರಹದ ಬಿರುದು ಬಿನ್ನಾಣವೇಟು? ಕೋಲಾಹಲ ಎಬ್ಬಿಸಿ ಮುದ್ರೆಯಾಗ್ಯಾವ ನಮ್ ಹೃದಯದೊಳಗsss

ಬರಿಗೈಲಿ ಬಂದು,
ನಮ್ಮೆದೆ ತುಳಿದು
ಕೊಳ್ಳೆ ಹೊಡೆದಿರಿ
ನಾವು ಸತ್ತು- ಶತಮಾನಗಳಾಗ್ಯಾವ,
ಪಾಕಡಿ ನರಿಯಾಂಗss ಬಿಕ್ಳಳಿಸೋ..ನಾಟಗಕ್ಕss
ಸಹಾಯಕ ನಟರಿರಲಿ ಅಂತಾ…..
ಜಯಕಾರ ಹೇಳೋರ್ನಾ
ಕರಕೊಂಡು
ಮತ ಕೇಳಾಕss ಬಂದೀರಲ್ಲಾ…
ನಿಮ್ ಅಸಹ್ಯದ ಗಂಟಲು ತುಂಬಾಕsss
ನಮ್ಹೆಂಜಲು ಬೇಕೇನು?

ಕೊಲ್ಲಿದವ್ರನ್ನಾ
ಮತ್ತೆ..ಮತ್ತೆ ಕೊಲ್ಲೋದು
ಒಣಗಿರೋ ಮೊಲೆಯಾಗ- ರಕ್ತ ಚೀಪೋದು
ಕತ್ತಲೆ-ಬೆಳಕಿನ-
ದೇಹ ನುಂಗಿದೋರ್ಗೆss
ಯಾವ ಪ್ರಾಣಿ ಮಲ- ಸಾಕಾದೀತು?
ಸಾವು-ಬದುಕಿನ ನಡುಕss
ಗೆರೆ ಕೊರ್ದು ಕುಂತವ್ರಗೆ
ಹಗರಣ,ಸತ್ಯದ್ಹರಣ ಮಾಡೋರ್ಗೆ…. .
ಯ್ಯಾಂಗ್ಹ ನಂಬೋದು?

ಗೆಲ್ಲೂತಕss ಬುದ್ಧರಾಗಿರ್ತೀರಿ
ಗೆದ್ದಮ್ಯಾಲss
ಗಧ ತಿರುವುತೀರಿ ಹಣದ್ಹಾಗsss
ನಿಮ್ಹೆಣ ಸುಟ್ರನೂsss
ಉಳಿಯ್ಯಾಂಗ ಅಜೆಯರಾಗಿರುತೀರಿ….
ಸಾಕಾಗಿಲ್ಲೇನ್ರೋ………
ಹಲ್ಕಟ್ ಹಲಾಲಕೋರ್ರೆss
ನಂಜಾಗಿಕಿಲ್ಲೇನು……
ನಮ್ಹೇಲು…..?
ನಂಬು….ನಂಬು…ಅಂತಾ..
ಕಾಲಿಗ್ಬಿದ್ರsss ನಾಯಿ ಬಾಲನಾsssss
ಯ್ಯಾಂಗ್ಹ ನಂಬೋದು?


Leave a Reply

Back To Top