ರಾತ್ರಿಯ ಕಾವಲುಗಾರ

ಕಾವ್ಯ ಸಂಗಾತಿ

ರಾತ್ರಿಯ ಕಾವಲುಗಾರ

ಹೆಚ್.ಮಂಜುಳಾ.

ರಾತ್ರಿಯ ಕಾವಲುಗಾರ
ನಿನಗಿಲ್ಲ ಯಾರಿಂದಲೂ ಆಭಾರ
ನಿರೀಕ್ಷಸದೆಯೇ ಯಾರ ಕೃತಜ್ಞತೆ-ಉಪಕಾರ ನೀ
ನಿರ್ವಹಿಸುವೆ ಕಾಯುವ ಕಾರ್ಯ.

ನಿನಗೆ ಹಾಕುವರು
ಇವರೊಂದು ತುತ್ತು ರೊಟ್ಟಿ
ಥೂ…ನಾಯಿ…
ಎನ್ನುವರು ಕುಟ್ಪಿ ಕುಟ್ಟಿ!

ಆನೆ-ಶ್ವಾನ ಹೊಗಳಿಕೆ-ತೆಗಳಿಕೆ
ಇಲ್ಲೂ ಬಿಡದು ಇವರ ಮೇಲು ಕೀಳಿನ ಬುದ್ಧಿ,
ಇವರಿಗೆಲ್ಲಿಯದು ನಿನ್ನ
ಕರ್ಮನಿಷ್ಟೆಯ ಅರಿವು?!

ಗೂರ್ಕನೂ ಬೇಡುವನು
ಎಂಟಾಣೆ ರೂಪಾಯಿಯ
ಕನಿನದ್ಯಾವ ಬೇಡಿಕೆಗಳು ಹೇಳು
ಕಾವಲೊಂದೇ ನಿನ್ನ ಗುರಿ
ಕಾಯುತ್ತಾ ಮನೆ ಸುತ್ತುವೆ

ಗೂರ್ಕನೂ ಬೇಡುವನು
ಎಂಟಾಣೆ ರೂಪಾಯಿಯ
ನಿನದ್ಯಾವ ಬೇಡಿಕೆಗಳು ಹೇಳು
ಕಾವಲೊಂದೇ ನಿನ್ನ ಗುರಿ
ಕಾಯುತ್ತಾ ಮನೆ ಸುತ್ತುವೆ
ಬೊಗಳಿ ನಮ್ಮನ್ನು ಎಚ್ಚರಿಸುವೆ
ಕಳ್ಳ ಕಾಕರಿಂದ ರಕ್ಷಿಸುವೆ
ಆದರೇನು….?!
ನಾಯಿ ಎಂಜಲು ತಿನ್ನುವ ನಾಯಿ
ಎನಿಸಿಕೊಳ್ಳುವುದ ನೀನರಿಯೇ.‌‌‌..


Leave a Reply

Back To Top