ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ಸಖ ಗೀತೆ
ಜೀವನವಿಡೀ
ನಿನ್ನ ಹುಡುಕಿದೆ ಸಖಾ
ಕೊನೆಗೆ ನನಗೆ ಸಿಕ್ಕಿದ್ದು
ನಿನ್ನ ನೆರಳು ಮಾತ್ರ
ಕಿವಿಗೆ ಇಂಪಾದ
ಆ ಧ್ವನಿ
ಕೋಗಿಲೆಯದು
ಅಂದುಕೊಂಡಿದ್ದೆ
ಆದರೆ ಅದು
ನಿನ್ನದೇ ಸಖಾ
ಸಖಾ….
ನಿನ್ನ ನೆರಳು
ಹಿಂಬಾಲಿಸಿದೆ
ನೀನೇ…
ಸಿಕ್ಕುಬಿಟ್ಟೆ
ಹೂವಂಥ ಹೃದಯ
ಏಕೋ ಕಲ್ಲಾಗಿದೆ ಸಖಾ
ಮೆತ್ತಗಿನ ಸ್ಪರ್ಶ
ಏಕೋ ಮುಳ್ಳಾಗಿದೆ ಸಖಾ