ಕಾವ್ಯ ಸಂಗಾತಿ
ಅಚ್ಚರಿಗೊಂಡೆ..
ಪ್ರೊ ವಿಜಯಲಕ್ಷ್ಮಿಪುಟ್ಟಿ
ಅಚ್ಚರಿಗೊಂಡೆ ದಂಡಿಯಾಗಿ ಕವನಗಳ ಬರೆಯುತ್ತಿದ್ದವ ತನ್ನವಳಿಗೆ ತಾನೇ ಅರ್ಥವಾಗದ ಮಹಾ ಕಾವ್ಯವಾದಾಗ..
ಅಚ್ಚರಿಗೊಂಡೆ
ಶಬ್ದಗಳ ಸೇರಿಸಿ ಕವನ ಬರೆಯುತ್ತಿದ್ದವ
ತನ್ನ ಪ್ರೇಯಸಿಗೆ ತಾನೇ ಕಠಿಣ ಶಬ್ದವಾದಾಗ..
ಅಚ್ಚರಿಗೊಂಡೆ
ಪ್ರತಿಮೆಗಳ
ಪೇರಿಸಿ ಕವನ ಬರೆಯುತ್ತಿದ್ದವ ಪ್ರೇಯಸಿಯ ಪ್ರಶ್ನೆಗೆ ಪ್ರತಿಮೆಯಾದಾಗ…
ಅಚ್ಚರಿಗೊಂಡೆ
ಅವಳ ನೂರೆಂಟು ಏಕೆ ಏನು ಎತ್ತಗಳಿಗೆ
ಅವ ಏನು ಮಾತಾಡದೆ ಪೂರ್ಣವಿರಾಮವನ್ನಿಟ್ಟಾಗ…
ಅಚ್ಚರಿ ಗೊಂಡೆ
ಅನೇಕ
ನನಗೆ ಗೊತ್ತಿಲ್ಲದ ಅವನ ಗೊತ್ತುಗಳ ಗೊತ್ತು ಮಾಡಿಕೊಂಡಾಗ, ಇನ್ನೂ ಅದೆಷ್ಟು ಅಚ್ಚರಿಗಳು ಗೊತ್ತಿಲ್ಲ ಬಿಡು..
ಪ್ರೊ ವಿಜಯ ಪುಟ್ಟಿ