ಕಾಣೆಯಾದ ಚೆಂದಿರ……!!

ಕಾವ್ಯ ಸಂಗಾತಿ

ಕಾಣೆಯಾದ ಚೆಂದಿರ……!!

ದೇವರಾಜ್ ಹುಣಸಿಕಟ್ಟಿ

.

ಜೊತೆಗಿರುವ
ಚೆಂದಿರನ ಕೊಲೆಯಾಗಿದೆ
ನಿನ್ನೆ ನಡು ರಸ್ತೆಯಲ್ಲಿ…..!!
ರಕ್ತ ಸಿಕ್ತ ಕಲೆಗಳ ಕಳೆದು
ಹೊಳೆವ ಚೆಂದಿರನ ತೊಳೆದು
ಸೆರೆ ಹಿಡಿಯಲಾಗಿದೆ
ಕೇಸರಿಯ ಹಳದಿಗಣ್ಣಲ್ಲಿ…..!!

ಗೋಡ್ಸೆ ಸಂತತಿಯ ತುಣುಕು
ಪರಂಪರೆಯ ಕೊಳಕು….
ಬೆಳದಿಂಗಳ ಕಂಡು ಕಂಗಾಲಾಗಿ….
ಗೊಳಿಟ್ಟಿದೆ ಸಂಘದಂಗಳದಲ್ಲಿ….!

ಜಗದ ಗುಂಡಿಗೆಯ ತುಂಬೆಲ್ಲ ತುಂಬಿರುವ
ತಂಬೆರಲ ತಂಪ ವಿಷವೆಂದು ಬಗೆದು..
ದುಸ್ವಪ್ನ ಕಂಡಿದೆ ನಡು ಹಗಲಲ್ಲಿ..!

ಭಗ್ನ ಕನಸೊಂದು ದಿಕ್ಕೆಟ್ಟು ರೋಧಿಸಿದಂತೆ…
ನಡು ಬೀದಿಯಲ್ಲಿ…!
ನೆತ್ತರು ಚೆಲ್ಲಿ…!!
ಬೀಗ ಜಡಿದಿದೆ ಪ್ರತಿ ಮನೆಯ ಬಾಗಿಲಿಗೆ ವಿಕೃತ ನಗುವ ತುಂಬಿ ತುಟಿಯಲ್ಲಿ…….!!

ಹುಡುಕಿ ತರುವವರಾರು
ನನ್ನ ಚೆಂದಿರನ…..!!

ಒಲವ ಬಟ್ಟಲ ಹಿಡಿದು…
ಕರುಣರಸದಿ ಮಿಡಿದು….
ಹೆಜ್ಜೆ ಹೆಜ್ಜೆಗೂ….!
ರಾತ್ರಿ ನಿದ್ರೆಗೂ….!

ಜೊತೆಗಿದ್ದ

ಚಿಂತನೆಯ ಬೆಳದಿಂಗಳೊಂದನ್ನ…!

ಜೊತೆಗಿರುವ
ಚೆಂದಿರನ ಕೊಲೆಯಾಗಿದೆ
ನಿನ್ನೆ ನಡು ರಸ್ತೆಯಲ್ಲಿ…..!!
ರಕ್ತ ಸಿಕ್ತ ಕಲೆಗಳ ಕಳೆದು
ಹೊಳೆವ ಚೆಂದಿರನ ತೊಳೆದು
ಸೆರೆ ಹಿಡಿಯಲಾಗಿದೆ
ಕೇಸರಿಯ ಹಳದಿಗಣ್ಣಲ್ಲಿ…..!!

ಗೋಡ್ಸೆ ಸಂತತಿಯ ತುಣುಕು
ಪರಂಪರೆಯ ಕೊಳಕು….
ಬೆಳದಿಂಗಳ ಕಂಡು ಕಂಗಾಲಾಗಿ….
ಗೊಳಿಟ್ಟಿದೆ ಸಂಘದಂಗಳದಲ್ಲಿ….!

ಜಗದ ಗುಂಡಿಗೆಯ ತುಂಬೆಲ್ಲ ತುಂಬಿರುವ
ತಂಬೆರಲ ತಂಪ ವಿಷವೆಂದು ಬಗೆದು..
ದುಸ್ವಪ್ನ ಕಂಡಿದೆ ನಡು ಹಗಲಲ್ಲಿ..!

ಭಗ್ನ ಕನಸೊಂದು ದಿಕ್ಕೆಟ್ಟು ರೋಧಿಸಿದಂತೆ…
ನಡು ಬೀದಿಯಲ್ಲಿ…!
ನೆತ್ತರು ಚೆಲ್ಲಿ…!!
ಬೀಗ ಜಡಿದಿದೆ ಪ್ರತಿ ಮನೆಯ ಬಾಗಿಲಿಗೆ ವಿಕೃತ ನಗುವ ತುಂಬಿ ತುಟಿಯಲ್ಲಿ…….!!

ಹುಡುಕಿ ತರುವವರಾರು
ನನ್ನ ಚೆಂದಿರನ…..!!

ಒಲವ ಬಟ್ಟಲ ಹಿಡಿದು…
ಕರುಣರಸದಿ ಮಿಡಿದು….
ಹೆಜ್ಜೆ ಹೆಜ್ಜೆಗೂ….!
ರಾತ್ರಿ ನಿದ್ರೆಗೂ….!

ಜೊತೆಗಿದ್ದ

ಚಿಂತನೆಯ ಬೆಳದಿಂಗಳೊಂದನ್ನ…!


Leave a Reply

Back To Top