ಗಜಲ್

ಕಾವ್ಯಯಾನ

ಗಜಲ್

ಮಾಜಾನ್ ಮಸ್ಕಿ

ನಿನ್ನ ದಸ್ತಕ್ ನನ್ನ ಹೃದಯದ ಮೇಲೆ ಬರೆದು ಬಿಟ್ಟೆ
ಒಲವನ್ನು ಗೆಲ್ಲಲು ನನ್ನನ್ನೇ ತೊರೆದು ಬಿಟ್ಟೆ

ಇನ್ನೊಬ್ಬರ ಬಾಹುಬಂಧನದಲ್ಲಿ ಇರುವುದನ್ನು ಕಂಡೆ
ಇನಿಯ ಆಸೆಯಿಂದ ಕಟ್ಟಿದ ಆಶೀಯಾನಾ ಮುರಿದು ಬಿಟ್ಟೆ

ತಪ್ಪು ಮಾಡಿರುವೆ ನಿನ್ನನ್ನು ನಂಬಿ ಬದುಕು ಸಾಗಿಸಿದ್ದು
ನೀ ದೂರಾದ ಸಮಯಕ್ಕೆ ಹಾರುವುದು ಬಿಟ್ಟೆ

ಒಡೆದ ಹೃದಯ ಎಂದಾದರು ಸರಿಯಾಗುವುದೆ
ಹಣೆಬರಹದಲ್ಲಿ ಇರದ ಪ್ರೀತಿ ಕಳೆದು ಬಿಟ್ಟೆ

“ಮಾಜಾ” ಕಲ್ಲಲ್ಲಿ ಅರಳಿದ ವಜ್ರವಾಗಿ ಬರುವೆ ನಿನ್ನ ಮುಂದೆ
ನಿನ್ನಯ ಮೋಸಕ್ಕೆ ಒದ್ದೆ ಆಗಿದ್ದ ಕಣ್ಣು ತೊಳೆದು ಬಿಟ್ಟೆ


Leave a Reply

Back To Top