ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ತಂಬೆಳಕಿನ ತಂಪಿನಲ್ಲಿ ನೀ ಮುಡಿಸಿದ ಮಲ್ಲಿಗೆ ಕಂಪಾಗುವುದು ಇನಿಯ
ನಿನ್ನ ಬಿಗಿದಪ್ಪಿನ ಬಾಹುಬಂಧನ ಬಿಸಿಯಾಗುವುದು ಇನಿಯ

ಇರುಳು ಆಕಾಶಕ್ಕೆ ಚಾಂದನಿ ಬೆಳಕು ಚೆಲ್ಲಿಹುದು ಸದಾ ಹೊಸತನದಲ್ಲಿ
ಪ್ರೇಮಿಗಳ ಪ್ರೇಮ ಭಾವನೆ ಕೆರಳಿಸಿ ಮನ ನಲಿವಾಗುವುದು ಇನಿಯ

ನಿನ್ನ ಬರುವಿಕೆಯಲ್ಲಿ ಪೌರ್ಣಿಮೆಯ ದಿನಕ್ಕಾಗಿ ಕಾಯುತ್ತಿರುವೆ ಸಖಾ
ಕನಸೆಲ್ಲ ನನಸಾಗಿ ಶೃಂಗಾರ ರಾಸಲೀಲೆಯಲ್ಲಿ ಒಂದಾಗುವುದು ಇನಿಯ

ನಿನ್ನ ಸಂಪೂರ್ಣತೆಯು ನನ್ನದೇ ಇರಬೇಕೆಂಬ ಸ್ವಾರ್ಥಿ ನಾನು
ಅರ್ಧ ಚಂದ್ರ ಕದ್ದು ತಿಂದವರಾರು ನೋವಾಗುವುದು ಇನಿಯ

ಪ್ರತಿ ರಾತ್ರಿ ಫಳ ಫಳನೆ ಹೊಳೆಯುವ ನಕ್ಷತ್ರಗಳಿವೆ “ಮಾಜಾ”
ಬಯಕೆಗಳ ಪ್ರೀತಿಯ ನಿರೀಕ್ಷೆ ಕಳಚಿ ಮರೆಯಾಗುವುದು ಇನಿಯ


Leave a Reply

Back To Top