ಗಜಲ್

ಕಾವ್ಯಸಂಗಾತಿ

ಗಜಲ್

ಬಾಗೇಪಲ್ಲಿ

ನಾನು ಸಿರಿವಂತನಲ್ಲಾ ಪ್ರಿಯೆ
ಕಡು ಬಡವನಂತಲ್ಲಾ ಪ್ರಿಯೆ

ಕುಟುಂಬಕೆ ಒಂದು ವಾಹನ ಅಗತ್ಯವಿದೆ
ಕಾರು ಒಡೆಯನಾನಲ್ಲಾ ಪ್ರಿಯೆ.

ಆಸರೆ ಎನಲು ಮನೆಯುಂಟೆನಗೆ
ಮಹಡಿ ಮನೆಯವನಲ್ಲಾ ಪ್ರಿಯೆ

ಆಗೇ ಆಗುವೆ ಎಲ್ಲಇರುವ ಜಾನ್ ನಂತೆ
ಆತನಕ ಕಾಯುವೆಯಲ್ಲಾ ಪ್ರಿಯೆ

ಕೃಷ್ಣ ಪ್ರೀತಿಯ ಸಾಬೀತು ಮಾಡಲೇ ಬೇಕೆ
ಅದಕೆ ಜಾನ್ ವಿಳಾಸ ಕೇಳುವೆಯಲ್ಲಾ ಪ್ರಿಯೆ


Leave a Reply

Back To Top