ತೀರ

ಕಾವ್ಯ ಸಂಗಾತಿ

ತೀರ

ಮಾಜಾನ್ ಮಸ್ಕಿ

ಮನಸ್ಸಿನ ನೋವಿಗೆ
ವಯಸ್ಸಿನ ಮಿತಿಯೂ ಇಲ್ಲ
ಪ್ರೀತಿಗೂ —-

ಅತೃಪ್ತ ಮನದ ಬಯಕೆ
ನೀರಿನಲ್ಲಿ ಮುಳುಗೇಳುವ
ಪಾಚಿಟ್ಟ ಕಪ್ಪೆಯಂತೆ

ನಿರಾಶೆ ಜೊತೆಯಾದಾಗ
ಭರವಸೆಯ ಆಸರೆ ಬೇಕು
ಬದುಕಲು

ಕತ್ತಲೆ ಕಳೆದ ಮೇಲೆ
ಬೆಳಕು ಮೂಡುವುದು
ಬೇಕು ತಾಳ್ಮೆ

ಜಗಕ್ಕೆ ಉಂಟು ಗ್ರಹಣ
ಬಾಳಿನ ನಂಟಿನಲ್ಲಿಯೂ —-

ದೋಣಿ ಸಜ್ಜುಗೊಳಿಸಬೇಕಿದೆ
ನೋವು – ನಲಿವುಗಳ ಮೇಲೆ

ತೇಲುತ್ತಾ ತೀರ ಸೇರಲು.


ಮಾಜಾನ್ ಮಸ್ಕಿ

Leave a Reply

Back To Top