ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ಎಂದೋ ಪ್ರೀತಿಯ ಅಮಲಿನಲ್ಲಿ ಮಿಂದಿದ್ದೇನೆ
ನಲ್ಲನ ತೋಳ ತೆಕ್ಕೆಯಲ್ಲಿ ಬಂಧಿಸಿದ್ದೇನೆ
ಪ್ರೀತಿಯ ಶೃಂಗಾರದ ದಿನಗಳು ಬಲು ಸೊಗಸು
ನಿಷೆ ಇಳಿಯದ ನಷೆಯಲ್ಲಿ ಮುಳುಗಿದ್ದೇನೆ
ಮುನಿಸು ಮೌನ ಪಿಸುಮಾತಿನ ನಗೆ ಅಲ್ಲಿತ್ತು
ಚಂಚತೆಯ ಮೀನಿನಂತೆ ಒಲವಿನಲ್ಲಿ ಈಜಿದ್ದೇನೆ
ಒಂದು ರಾತ್ರಿಯೂ ವಿರಹ ಕಾಣದ ದಿನಗಳವು
ರಾತ್ರಿಯೂ ಸೂರ್ಯನ ಬೆಳಕಿನಲ್ಲಿ ಬದುಕಿದ್ದೇನೆ
ಕಣ್ಣು ತೆರೆದಾಗ ಸುಂದರ ಕನಸಾಗಿತ್ತೇನು ” ಮಾಜಾ “
ನನಸನ್ನು ದೂರದ ಮರೀಚಿಕೆಯಲ್ಲಿ ಕಾಣುತ್ತಿದ್ದೇನೆ